Select Your Language

Notifications

webdunia
webdunia
webdunia
webdunia

ರವಿಶಾಸ್ತ್ರಿಗೆ ಅಪ್ಪಿ ವಿದಾಯ ಹೇಳಿದ ವಿರಾಟ್ ಕೊಹ್ಲಿ

ರವಿಶಾಸ್ತ್ರಿಗೆ ಅಪ್ಪಿ ವಿದಾಯ ಹೇಳಿದ ವಿರಾಟ್ ಕೊಹ್ಲಿ
ದುಬೈ , ಮಂಗಳವಾರ, 9 ನವೆಂಬರ್ 2021 (09:30 IST)
ದುಬೈ: ಟಿ20 ವಿಶ್ವಕಪ್ ನಲ್ಲಿ ನಿನ್ನೆಯ ಪಂದ್ಯದ ಬಳಿಕ ಟೀಂ ಇಂಡಿಯಾ ಕೋಚ್ ಸ್ಥಾನದಿಂದ ರವಿಶಾಸ್ತ್ರಿ ಮತ್ತು ಬಳಗ ಹೊರನಡೆಯುತ್ತಿದೆ. ಹೀಗಾಗಿ ರವಿಶಾಸ್ತ್ರಿ ಮತ್ತು ಕೋಚಿಂಗ್ ಬಳಗಕ್ಕೆ ನಿನ್ನೆ ವಿದಾಯದ ಪಂದ್ಯವಾಗಿತ್ತು.

ನಿನ್ನೆಯ ಪಂದ್ಯದಲ್ಲಿ ನಮೀಬಿಯಾ ವಿರುದ್ಧ 9 ವಿಕೆಟ್ ಗಳಿಂದ ಭರ್ಜರಿಯಾಗಿ ಗೆದ್ದ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರವಿಶಾಸ್ತ್ರಿ ಮತ್ತು ಇತರ ಕೋಚಿಂಗ್ ಸಿಬ್ಬಂದಿಗಳನ್ನು ಅಪ್ಪಿ ವಿದಾಯ ನೀಡಿದ್ದಾರೆ. ವಿಶೇಷವೆಂದರೆ ಕೊಹ್ಲಿಗೂ ಟಿ20 ನಾಯಕರಾಗಿ ಇದು ಕೊನೆಯ ಪಂದ್ಯವಾಗಿತ್ತು.

ಇದರೊಂದಿಗೆ ಶಾಸ್ತ್ರಿ-ಕೊಹ್ಲಿ ಜೋಡಿಯ ಯುಗಾಂತ್ಯವಾಗಿದೆ. ನಿನ್ನೆ ಪಂದ್ಯಕ್ಕೂ ಮೊದಲು ರವಿಶಾಸ್ತ್ರಿ ವಿದಾಯ ಭಾಷಣ ಮಾಡಿದ್ದರು. ಪಂದ್ಯದ ಬಳಿಕ ಕೊಂಚ ಭಾವುಕರಾದ ರವಿಶಾಸ್ತ್ರಿ ಪ್ರತಿಯೊಬ್ಬರ ಬಳಿ ತೆರಳಿ ಧನ್ಯವಾದ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾದಲ್ಲಿ ಕೊಹ್ಲಿ-ಶಾಸ್ತ್ರಿ ಜೋಡಿ ಯುಗಾಂತ್ಯ