ಮುಂಬೈ: ಟಿ20 ವಿಶ್ವಕಪ್ ಅಭಿಯಾನ ಮುಗಿಸಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಂಪತಿ ಮುಂಬೈಗೆ ಬಂದಿಳಿದಿದ್ದಾರೆ.
ಈ ವೇಳೆ ವಿರುಷ್ಕಾಗೆ ತಮ್ಮ ಮಗಳು ವಮಿಕಾಳನ್ನು ಫೋಟೋಗ್ರಾಫರ್ ಗಳ ಕಣ್ಣಿಂದ ಮರೆಮಾಚುವುದೇ ದೊಡ್ಡ ಸಾಹಸವಾಗಿದೆ. ವಿಮಾನ ನಿಲ್ದಾಣದಲ್ಲಿ ಕಾರು ಏರುವ ಮುನ್ನ ವಮಿಕಾಳ ಫೋಟೋ ತೆಗೆಯಲು ಫೋಟೋಗ್ರಾಫರ್ ಗಳು ಪೈಪೋಟಿಗೆ ಬಿದ್ದಿದ್ದರು.
ಈ ವೇಳೆ ತಮ್ಮ ಪುತ್ರಿಯ ಮುಖ ಮರೆಮಾಚಲು ವಿರಾಟ್ ದಂಪತಿ ಆಕೆಯನ್ನು ಗಟ್ಟಿಯಾಗಿ ಎದೆಗೊತ್ತಿಕೊಂಡು ಹರಸಾಹಸ ಪಟ್ಟು ಕಾರು ಏರಿದ್ದಾರೆ. ಹಿಂದೆಯೂ ಇದೇ ರೀತಿ ಆಗಿತ್ತು. ಆಗ ಸಾಮಾಜಿಕ ಜಾಲತಾನದಲ್ಲಿ ವಮಿಕಾ ಅವಸ್ಥೆ ನೋಡಿ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದರು. ಈ ರೀತಿ ಫೋಟೋಗ್ರಾಫರ್ ಗಳ ಕಣ್ಣಿಗೆ ಬೀಳದಂತೆ ಮಗಳನ್ನು ಕರೆದೊಯ್ಯುವುದೇ ವಿರಾಟ್ ದಂಪತಿಗೆ ದೊಡ್ಡ ಸವಾಲಾಗಿದೆ.