Select Your Language

Notifications

webdunia
webdunia
webdunia
webdunia

ದ್ರಾವಿಡ್ ಬರೋವರೆಗೂ ಟೀಂ ಇಂಡಿಯಾಕ್ಕೆ ವಿವಿಎಸ್ ಲಕ್ಷ್ಮಣ್ ಕೋಚ್

ದ್ರಾವಿಡ್ ಬರೋವರೆಗೂ ಟೀಂ ಇಂಡಿಯಾಕ್ಕೆ ವಿವಿಎಸ್ ಲಕ್ಷ್ಮಣ್ ಕೋಚ್
ದುಬೈ , ಗುರುವಾರ, 25 ಆಗಸ್ಟ್ 2022 (09:20 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಮೊದಲು ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಕೊರೋನಾ ಸೋಂಕಿಗೊಳಗಾಗಿದ್ದಾರೆ.

ಹೀಗಾಗಿ ಅವರು ಟೀಂ ಇಂಡಿಯಾ ಏಷ್ಯಾ ಕಪ್ ತಂಡದ ಜೊತೆ ದುಬೈಗೆ ತೆರಳಲಿಲ್ಲ. ಇದೀಗ ದ್ರಾವಿಡ್ ಮತ್ತೆ ಸೋಂಕಿನಿಂದ ಗುಣಮುಖರಾಗಿ ನೆಗೆಟಿವ್ ವರದಿ ಬಂದ ಬಳಿಕವಷ್ಟೇ ತಂಡವನ್ನು ಕೂಡಿಕೊಳ್ಳಬಹುದಾಗಿದೆ. ಹೀಗಾಗಿ ಅಲ್ಲಿಯವರೆಗೆ ತಂಡದ ಮುಖ್ಯ ಕೋಚ್ ಜವಾಬ್ಧಾರಿಯನ್ನು ವಿವಿಎಸ್ ಲಕ್ಷ್ಮಣ್ ವಹಿಸಿಕೊಳ್ಳಲಿದ್ದಾರೆ.

ಜಿಂಬಾಬ್ವೆ ಸರಣಿಯಲ್ಲಿ ವಿವಿಎಸ್ ಲಕ್ಷ್ಮಣ್ ತಂಡದ ಕೋಚ್ ಆಗಿದ್ದರು. ಈಗ ದ್ರಾವಿಡ್ ಇಲ್ಲದ ಕಾರಣ ಜಿಂಬಾಬ್ವೆ ಪ್ರವಾಸದಿಂದ ನೇರವಾಗಿ ದುಬೈಗೆ ಬಂದಿಳಿಯಲಿರುವ ಲಕ್ಷ್ಮಣ್ ಮಧ್ಯಂತರ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಪಾಕಿಸ್ತಾನ ಕದನ: ಕೊಹ್ಲಿ-ಬಾಬರ್ ಮೇಲೆ ಎಲ್ಲರ ಕಣ್ಣು