Select Your Language

Notifications

webdunia
webdunia
webdunia
webdunia

ಭಾರತ-ಪಾಕಿಸ್ತಾನ ಕದನ: ಕೊಹ್ಲಿ-ಬಾಬರ್ ಮೇಲೆ ಎಲ್ಲರ ಕಣ್ಣು

ಭಾರತ-ಪಾಕಿಸ್ತಾನ ಕದನ: ಕೊಹ್ಲಿ-ಬಾಬರ್ ಮೇಲೆ ಎಲ್ಲರ ಕಣ್ಣು
ದುಬೈ , ಗುರುವಾರ, 25 ಆಗಸ್ಟ್ 2022 (08:30 IST)
ದುಬೈ: ಯುಎಇನಲ್ಲಿ ಭಾನುವಾರ ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಮತ್ತು ಪಾಕ್ ನಾಯಕ ಬಾಬರ್ ಅಜಮ್ ಮೇಲೆ ಎಲ್ಲರ ನಿರೀಕ್ಷೆಯಿದೆ.

ಬಾಬರ್ ಅಜಮ್ ರನ್ನು ವಿರಾಟ್ ಕೊಹ್ಲಿಗೆ ಹೋಲಿಕೆ ಮಾಡಲಾಗುತ್ತಿದೆ. ಆದರೆ ಕೊಹ್ಲಿ ಸದ್ಯಕ್ಕೆ ಫಾರ್ಮ್ ಕೊರತೆ ಎದುರಿಸುತ್ತಿದ್ದಾರೆ. ಆದರೆ ಅಜಮ್ ಟಿ20 ಫಾರ್ಮ್ಯಾಟ್ ನಲ್ಲಿ ಅದ್ಭುತ ಬ್ಯಾಟಿಗ. ಹೀಗಾಗಿ ಇಬ್ಬರು ಬ್ಯಾಟಿಂಗ್ ಕಲಿಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಟೀಂ ಇಂಡಿಯಾ ಗೆಲ್ಲಬೇಕಾದರೆ ಕೊಹ್ಲಿ ಮರಳಿ ಫಾರ್ಮ್ ಪ್ರದರ್ಶಿಸಬೇಕು. ಇದರಿಂದಾಗಿ ಕೊಹ್ಲಿ ಟೀಕಾಕಾರರ ಬಾಯಿ ಮುಚ್ಚಿಸುವುದಷ್ಟೇ ಅಲ್ಲ, ಎದುರಾಳಿಗಳಿಗೂ ಭೀತಿ ಒಡ್ಡುತ್ತಾರೆ. ಹೀಗಾಗಿ ಏಷ್ಯಾ ಕಪ್ ನಲ್ಲಿ ಮರಳಿ ಫಾರ್ಮ್ ಗೆ ಮರಳಲು ಕೊಹ್ಲಿ ಕಠಿಣ ಪ್ರಯತ್ನ ನಡೆಸಿದ್ದಾರೆ. ಅವರ ಪ್ರಯತ್ನಕ್ಕೆ ಫಲ ಸಿಗಲಿ ಎಂಬುದೇ ಅಭಿಮಾನಿಗಳ ಹಾರೈಕೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಗೆ ಮುನ್ನ ಹೊಸ ಮನೆ ಮಾಡಿಕೊಂಡ ಕೆಎಲ್ ರಾಹುಲ್-ಅಥಿಯಾ