Select Your Language

Notifications

webdunia
webdunia
webdunia
Sunday, 13 April 2025
webdunia

ಇನ್ಮುಂದೆ ಜುಲೈ 9 ಕ್ಕೆ ಹುಟ್ಟಿದವರು ಟೀಂ ಇಂಡಿಯಾ ಕ್ರಿಕೆಟ್ ತಂಡಕ್ಕೆ ನಾಯಕ!

ವೀರೇಂದ್ರ ಸೆಹ್ವಾಗ್
ಮುಂಬೈ , ಬುಧವಾರ, 11 ಜುಲೈ 2018 (09:39 IST)
ಮುಂಬೈ: ಕ್ರಿಕೆಟ್ ನಿಂದ ನಿವೃತ್ತಿಯಾದರೂ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಮ್ಮ ಮಾತಿನಲ್ಲೇ ಚಮಕ್ ಕೊಡುವುದನ್ನು ಮಾತ್ರ ಬಿಟ್ಟಿಲ್ಲ. ಇದೀಗ ಟೀಂ ಇಂಡಿಯಾ ನಾಯಕನ ವಿಚಾರವಾಗಿ ಅಂತಹದ್ದೇ ಸೂಪರ್ ಹಿಟ್ ಟ್ವೀಟ್ ಮಾಡಿದ್ದಾರೆ.

ಧೋನಿ, ಗಂಗೂಲಿ ಮತ್ತು ಸುನಿಲ್ ಗವಾಸ್ಕರ್ ಬರ್ತ್ ಡೇ ಕ್ರಮವಾಗಿ ಜುಲೈ 7,8 ಮತ್ತು 10 ರಂದು ಬರುತ್ತದೆ. ಇವರೆಲ್ಲರೂ ಟೀಂ ಇಂಡಿಯಾದ ಯಶಸ್ವೀ ನಾಯಕರು. ಹೀಗಾಗಿ ಮುಂದೆ ಜುಲೈ 9 ರಂದು ಹುಟ್ಟಿದವರು ಟೀಂ ಇಂಡಿಯಾದ ನಾಯಕರಾಗಲಿದ್ದಾರೆ ಎಂದು ಸೆಹ್ವಾಗ್ ಟ್ವಿಟರ್ ನಲ್ಲಿ ಜೋಕ್ ಮಾಡಿದ್ದಾರೆ.

ವೀರೂ ಮಾಡಿರುವ ಈ ಟ್ವೀಟ್ ಗೆ ಸಾವಿರಾರು ಮಂದಿ ಕಾಮೆಂಟ್ ಮಾಡಿದ್ದು, ತಮ್ಮದು ಜುಲೈ 9 ರಂದು ಬರ್ತ್ ಡೇ. ನಮಗೆ ಟೀಂ ಇಂಡಿಯಾ ನಾಯಕನಾಗುವ ಅವಕಾಶ ಸಿಗಬಹುದೇ ಎಂದು ಕಾಲೆಳೆದಿದ್ದಾರೆ. ಅಂತೂ ಸೆಹ್ವಾಗ್ ಹೊಡೆದಿರುವ ಈ ಟ್ವೀಟ್ ಹೊಡೆತ ಸೂಪರ್ ಹಿಟ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

‘ನಂಗೇನು ಹುಚ್ಚಾ?’ ಕುಲದೀಪ್ ಯಾದವ್ ಮೇಲೆ ಧೋನಿ ಇಷ್ಟೊಂದು ಸಿಟ್ಟಾಗಿದ್ದು ಯಾಕೆ ಗೊತ್ತಾ?