ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ ವಿರುದ್ಧ ನೀಡಿದ ನಾಟೌಟ್ ತೀರ್ಪೊಂದು ವಿವಾದಕ್ಕೆ ಕಾರಣವಾಗಿದೆ.
ಅಕ್ಸರ್ ಪಟೇಲ್ ಬೌಲಿಂಗ್ ನಲ್ಲಿ ಜೋ ರೂಟ್ ಹೊಡೆದ ಬಾಲ್ ಪ್ಯಾಡ್ ಗೆ ತಾಗಿ ವಿಕೆಟ್ ಕೀಪರ್ ಕ್ಯಾಚ್ ಪಡೆದಿದ್ದರು. ಹೀಗಾಗಿ ಭಾರತೀಯರು ಔಟ್ ಮನವಿ ಸಲ್ಲಿಸಿದರು. ಆದರೆ ಅಂಪಾಯರ್ ನಿರಾಕರಿಸಿದರು. ಹೀಗಾಗಿ ಭಾರತೀಯರು ಡಿಆರ್ ಎಸ್ ಗೆ ಮನವಿ ಸಲ್ಲಿಸಿದರು. ಟಿವಿ ಅಂಪಾಯರ್ ಪರಾಮರ್ಶಿಸುವ ವೇಳೆ ಇದು ಎಲ್ ಬಿಡಬ್ಲ್ಯು ಔಟ್ ನೀಡಲು ಅರ್ಹವಾಗಿತ್ತು. ಆದರೆ ಅಲ್ಲೂ ಫೀಲ್ಡ್ ಅಂಪಾಯರ್ ನಿರ್ಣಯದಂತೆ ನಾಟೌಟ್ ಘೋಷಿಸಲಾಯಿತು. ಇದು ಕೊಹ್ಲಿ ಸಿಟ್ಟಿಗೆ ಕಾರಣವಾಯಿತು. ಅಂಪಾಯರ್ ಜೊತೆ ವಾಗ್ವಾದಕ್ಕೂ ಇಳಿದರು. ಆದರೆ ಪ್ರಯೋಜನವಾಗಲಿಲ್ಲ. ಈ ವಿವಾದಾತ್ಮಕ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಜೋ ರೂಟ್ ಗೆ ಔಟ್ ನೀಡಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.