Publish Date: Tue, 16 Feb 2021 (09:37 IST)
Updated Date: Tue, 16 Feb 2021 (09:39 IST)
ಇಸ್ಲಾಮಾಬಾದ್: ಟೀಂ ಇಂಡಿಯಾ ವಿಶ್ವದರ್ಜೆಯ ತಂಡವಾಗಿರುವುದನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೊಗಳಿದ್ದಾರೆ. ಅಲ್ಲದೆ, ನಮ್ಮ ತಂಡವೂ ಹಾಗೇ ಬೆಳೆಯಬೇಕು ಎಂದು ಆಗ್ರಹಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಇಮ್ರಾನ್, ಭಾರತ ತಂಡವನ್ನು ನೋಡಿ, ಹೇಗೆ ಅದು ವಿಶ್ವದರ್ಜೆಯ, ಗುಣಮಟ್ಟದ ತಂಡವಾಗಿ ಬೆಳೆದಿದೆ. ನಮ್ಮಲ್ಲೂ ಪ್ರತಿಭಾವಂತರಿದ್ದಾರೆ. ಆದರೆ ಅವರ ಹಾಗೆ ಬೆಳೆಯಬೇಕಿದೆ, ನಾವೂ ಮುಂದೊಂದು ದಿನ ಅವರಂತೆ ವಿಶ್ವದರ್ಜೆಯ ತಂಡವಾಗುತ್ತೇವೆ ಎಂಬ ವಿಶ್ವಾಸವಿದೆ ಎಂದು ಇಮ್ರಾನ್ ಹೊಗಳಿದ್ದಾರೆ.