Publish Date: Mon, 15 Feb 2021 (10:45 IST)
Updated Date: Mon, 15 Feb 2021 (10:49 IST)
ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ಇಂದು ಬೆಳಗಿನ ಅವಧಿಯಲ್ಲಿ ಒಟ್ಟಾರೆ ಐದು ವಿಕೆಟ್ ಕಳೆದುಕೊಂಡಿರುವ ಟೀಂ ಇಂಡಿಯಾ 106 ರನ್ ಗಳಿಸಿದೆ.
ನಿನ್ನೆ 54 1 ಕ್ಕೆ ವಿಕೆಟ್ ಕಳೆದುಕೊಂಡು ದಿನದಾಟ ಮುಗಿಸಿದ್ದ ಭಾರತ ಇಂದು 6 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿದೆ. ಇದರೊಂದಿಗೆ ಒಟ್ಟಾರೆ ಮುನ್ನಡೆ 301 ರನ್ ಆಗಿದೆ. ಇಂದು ಚೇತೇಶ‍್ವರ ಪೂಜಾರ (7), ರೋಹಿತ್ ಶರ್ಮಾ (26), ರಿಷಬ್ ಪಂತ್ (8), ಅಜಿಂಕ್ಯಾ ರೆಹಾನೆ (10) ಮತ್ತು ಅಕ್ಸರ್ ಪಟೇಲ್ (7) ವಿಕೆಟ್ ಕಳೆದುಕೊಂಡಿದೆ. ಇಂಗ್ಲೆಂಡ್ ಪರ ಜ್ಯಾಕ್ ಲೀಚ್ 3, ಮೊಯಿನ್ ಅಲಿ 2 ವಿಕೆಟ್ ಕಬಳಿಸಿದ್ದಾರೆ.ವಿರಾಟ್ 22 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.