Publish Date: Mon, 15 Feb 2021 (09:04 IST)
Updated Date: Mon, 15 Feb 2021 (09:06 IST)
ಚೆನ್ನೈ: ಟೀಂ ಇಂಡಿಯಾ ಮೊದಲ ಟೆಸ್ಟ್ ಸೋತಿತೆಂದು ಬೇಸರಗೊಳ್ಳಬೇಕಿಲ್ಲ. ಪ್ರತೀ ಬಾರಿ ಅದು ಮೊದಲು ಸೋಲುಂಡರೆ ಬಳಿಕ ಪುಟಿದೆದ್ದು ಸರಣಿ ಗೆಲ್ಲುತ್ತದೆ! ಹೀಗಂತ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ದ್ವಿತೀಯ ಟೆಸ್ಟ್ ಗೂ ಮುನ್ನ ಭವಿಷ್ಯ ನುಡಿದಿದ್ದರು.
ಅದೀಗ ನಿಜವಾಗುವ ಲಕ್ಷಣ ಕಾಣುತ್ತಿದೆ. ಟೀಂ ಇಂಡಿಯಾ ಈ ಸರಣಿ ಗೆಲ್ಲುತ್ತದೋ ಬಿಡುತ್ತದೋ, ಆದರೆ ಜಾಫರ್ ಹೇಳಿದಂತೆ ಮೊದಲ ಟೆಸ್ಟ್ ಸೋತ ಬಳಿಕ ಟೀಂ ಇಂಡಿಯಾ ಬೌಲಿಂಗ್ ನಲ್ಲಿ ಮತ್ತಷ್ಟು ಉತ್ಸಾಹ ಕಂಡುಬಂದಿದೆ. ಈ ಪಂದ್ಯ ಗೆಲ್ಲುವ ಭರವಸೆ ಮೂಡಿಸಿದೆ. ಅದಕ್ಕೆ ಟಾಸ್, ಪಿಚ್ ಕೂಡಾ ಪ್ರಮುಖ ಕಾರಣವಾಗಿರಬಹುದು. ಅದೇನೇ ಇರಲಿ, ಮೊದಲ ಟೆಸ್ಟ್ ಸೋತಿತೆಂದು ನಿರಾಶೆಗೊಳ್ಳಬೇಕಿಲ್ಲ. ಭಾರತಕ್ಕೆ ಇನ್ನೂ ಸರಣಿ ಗೆಲ್ಲುವ ಎಲ್ಲಾ ಅವಕಾಶಗಳಿವೆ.