Publish Date: Sun, 14 Feb 2021 (09:57 IST)
Updated Date: Sun, 14 Feb 2021 (09:58 IST)
ಚೆನ್ನೈ: ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವೆ ಎಲ್ಲವೂ ಸರಿಯಿಲ್ಲ ಎಂದು ಆಗಾಗ ವರದಿಯಾಗುತ್ತಲೇ ಇರುತ್ತದೆ. ಆದರೆ ನಿನ್ನೆ ರೋಹಿತ್ ಶತಕದ ಇನಿಂಗ್ಸ್ ಆಡುತ್ತಿರಬೇಕಾದರೆ ಕೊಹ್ಲಿ ನಡೆದುಕೊಂಡ ರೀತಿ ಇವೆಲ್ಲವೂ ಸುಳ್ಳು ಎಂದು ಸಾಬೀತುಪಡಿಸುತ್ತದೆ.
ರೋಹಿತ್ ಅದ್ಭುತವಾಗಿ ಚೆಂಡು ಬೌಂಡರಿ ಗೆರೆ ದಾಟಿಸಿದಾಗ ಪೆವಿಲಿಯನ್ ನಲ್ಲಿ ಬ್ಯಾಟಿಂಗ್ ಗೆ ಸಜ್ಜಾಗಿ ಕೂತಿದ್ದ ವಿರಾಟ್ ಖುಷಿಯಿಂದ ಯಸ್ ಬಾಯ್.. ಎಂದು ಕಿರುಚಿ ಚಪ್ಪಾಳೆ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಮೈದಾನದ ಹೊರಗೆ ಏನೇ ಇದ್ದರೂ ಆಟದ ವಿಚಾರಕ್ಕೆ ಬಂದರೆ ಇಬ್ಬರೂ ಪರಸ್ಪರ ಹುರಿದುಂಬಿಸುತ್ತಾರೆ ಎನ್ನುವುದು ಸಾಬೀತಾಗಿದೆ.