Publish Date: Sat, 13 Feb 2021 (11:47 IST)
Updated Date: Sat, 13 Feb 2021 (11:48 IST)
ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಊಟದ ವಿರಾಮದ ವೇಳೆಗೆ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿ ಸಂಕಷ್ಟದಲ್ಲಿದೆ.
ಒಂದೆಡೆ ರೋಹಿತ್ ಶರ್ಮಾ ಮಾತ್ರ ಹೋರಾಟ ನಡೆಸುತ್ತಿದ್ದು, 80 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದು ಭಾರತಕ್ಕೆ ದೊಡ್ಡ ಹೊಡೆತ ನೀಡಿದೆ. ಚೇತೇಶ್ವರ ಪೂಜಾರ 21 ರನ್ ಗಳಿಸಿ ಔಟಾಗಿದ್ದಾರೆ. ಇವರಿಬ್ಬರೂ ಬೆನ್ನು ಬೆನ್ನಿಗೆ ನಿರ್ಗಮಿಸಿದ್ದು, ಭಾರತಕ್ಕೆ ಆಘಾತ ನೀಡಿದೆ. ಇದೀಗ ಅಜಿಂಕ್ಯಾ ರೆಹಾನೆ 5 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.