ಚೆನ್ನೈ: ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯಕ್ಕೆ ಮೊದಲು ಮಾಧ‍್ಯಮಗೋಷ್ಠಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಕೇಳಿದ ಪ್ರಶ್ನೆಗೆ ಉಪನಾಯಕ ಅಜಿಂಕ್ಯಾ ರೆಹಾನೆ ಕೊಂಚ ಸಿಟ್ಟಾದ ಘಟನೆ ನಡೆದಿದೆ.
ಕೊಹ್ಲಿ ಮೊದಲ ಟೆಸ್ಟ್ ಸೋತ ಬಳಿಕ ಟೀಂ ಇಂಡಿಯಾ ಆಟಗಾರರ ಪ್ರದರ್ಶನದ ಬಗ್ಗೆ ಕಿಡಿ ಕಾರಿದ್ದರು. ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಎಲ್ಲಾ ಸಮಯದಲ್ಲೂ ಮೈದಾನದಲ್ಲಿ ಒಂದೇ ರೀತಿಯ ಉತ್ಸಾಹ, ಸಾಮರ್ಥ್ಯ ಪ್ರದರ್ಶಿಸಲು ಸಾಧ್ಯವಿಲ್ಲ. ನಾಯಕರಾಗಿ ಕೊಹ್ಲಿ ತಂಡಕ್ಕೆ ಮರಳಿದ್ದಾರೆ ಎಂಬ ಕಾರಣಕ್ಕೆ ಯಾರಲ್ಲೂ ಉತ್ಸಾಹ ಕುಂದಿಲ್ಲ. ವಿರಾಟ್ ಕೊಹ್ಲಿ ಯಾವತ್ತಿಗೂ ನನ್ನ ನಾಯಕ, ಮುಂದೆಯೂ ಆಗಿರುತ್ತಾರೆ. ನಿಮಗೆ ಇಲ್ಲಿ ಯಾವುದೇ ಮಸಾಲ ಸಿಗಲ್ಲ ಎಂದು ಕೊಂಚ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!