Publish Date: Fri, 12 Feb 2021 (09:11 IST)
Updated Date: Fri, 12 Feb 2021 (09:14 IST)
ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಗೆ ಮುನ್ನ ಟಿ ನಟರಾಜನ್ ಅವರನ್ನು ರಾಜ್ಯ ತಂಡದಿಂದ ರಿಲೀಸ್ ಮಾಡುವಂತೆ ಬಿಸಿಸಿಐ ತಮಿಳುನಾಡು ಕ್ರಿಕೆಟ್ ಸಂಸ್ಥೆಗೆ ಮನವಿ ಮಾಡಿದೆ.
ಅದರಂತೆ ಅವರನ್ನು ರಾಷ್ಟ್ರೀಯ ತಂಡಕ್ಕೆ ಬಿಟ್ಟುಕೊಡಲಾಗಿದೆ. ರವೀಂದ್ರ ಜಡೇಜಾ ಇಂಗ್ಲೆಂಡ್ ಸರಣಿಗೆ ಅಲಭ್ಯರಾಗಿದ್ದಾರೆ ಎಂದು ಖಚಿತವಾದ ಮೇಲೆ ಟಿ ನಟರಾಜನ್ ರನ್ನು ಅಗತ್ಯ ಬಂದರೆ ತಂಡಕ್ಕೆ ಕರೆಸಿಕೊಳ್ಳಲು ಬಿಸಿಸಿಐ ಮೀಸಲಿರಿಸಿದೆ. ಸದ್ಯಕ್ಕೆ ಟೆಸ್ಟ್ ಸರಣಿಗೆ ಅವರನ್ನು ಆಯ್ಕೆ ಮಾಡಲಾಗಿಲ್ಲ. ಆದರೆ ಮುಂದಿನ ತಿಂಗಳು ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ ಗಳ ಪಂದ್ಯಕ್ಕೆ ಅವರನ್ನು ಈಗಿನಿಂದಲೇ ತಯಾರುಗೊಳಿಸಲಾಗುತ್ತಿದೆ.