Publish Date: Thu, 11 Feb 2021 (09:17 IST)
Updated Date: Thu, 11 Feb 2021 (09:19 IST)
ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಸೋತ ಬಳಿಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಸ್ಪಿನ್ನರ್ ಆರ್ ಅಶ್ವಿನ್ ಇಲ್ಲಿ ಬಳಸಿದ ಎಸ್ ಜಿ ಬಾಲ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಬಾಲ್ ಗುಣಮಟ್ಟದ್ದಾಗಿರಲಿಲ್ಲ. 60 ಓವರ್ ಗೇ ಸೀಮ್ ಕಳೆದುಕೊಂಡ ಕಳಪೆ ಮಟ್ಟದ್ದಾಗಿರುತ್ತಿತ್ತು. ಈ ಸಮಸ್ಯೆ ಹಿಂದೆಯೂ ಇತ್ತು ಎಂದು ಕೊಹ್ಲಿ ಹೇಳಿದ್ದಾರೆ. ಅಶ್ವಿನ್ ಕೂಡಾ ಇದೇ ದೂರು ನೀಡಿದ್ದು, ಬಾಲ್ ಬೇಗನೇ ಹರಿದುಹೋಗುತ್ತಿತ್ತು. ಇಂಥ ಕಳಪೆ ಬಾಲ್ ನಿಂದ ನಮಗೆ ಕೆಟ್ಟ ಅನುಭವವಾಯಿತು ಎಂದು ಅವರು ಹೇಳಿದ್ದಾರೆ.