Publish Date: Wed, 10 Feb 2021 (09:03 IST)
Updated Date: Wed, 10 Feb 2021 (09:05 IST)
ಚೆನ್ನೈ: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ರನ್ನು ಆಯ್ಕೆ ಮಾಡದೇ ಇರುವ ಬಗ್ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಮರ್ಥನೆ ನೀಡಿದ್ದಾರೆ.
ಮೊದಲ ಟೆಸ್ಟ್ ಸೋತ ಬಳಿಕ ಮಾತನಾಡಿದ ಕೊಹ್ಲಿಗೆ ಕುಲದೀಪ್ ಯಾದವ್ ರನ್ನು ಆಡಿಸದೇ ತಪ್ಪು ಮಾಡಿದಿರಿ ಎನಿಸಿದೆಯಾ ಎಂದು ಪ್ರಶ್ನೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ಕೊಹ್ಲಿ ಯಾವುದೇ ಪಶ್ಚಾತ್ತಾಪವಿಲ್ಲ. ನಾವು ಬೌಲಿಂಗ್ ನಲ್ಲಿ ವೈವಿದ್ಯತೆ ಬಯಸಿದ್ದೆವು. ಒಂದು ವೇಳೆ ಕುಲದೀಪ್ ರನ್ನು ಆಯ್ಕೆ ಮಾಡಿದ್ದರೆ ಇಬ್ಬರು ಆಫ್ ಸ್ಪಿನ್ನರ್ ಆಗಿರುತ್ತಿದ್ದರು. ಅದಕ್ಕೇ ನದೀಂಗೆ ಅವಕಾಶ ಕೊಟ್ಟೆವು ಎಂದಿದ್ದಾರೆ. ಹೀಗೇ ಆದರೆ ಮುಂದಿನ ಟೆಸ್ಟ್ ಗೂ ಅವರಿಗೆ ಅವಕಾಶ ಸಿಗುವ ಸಾಧ‍್ಯತೆ ಕಡಿಮೆ.