Select Your Language

Notifications

webdunia
webdunia
webdunia
webdunia

ದ್ವಿತೀಯ ಟೆಸ್ಟ್ ಗೆ ಕೆಎಲ್ ರಾಹುಲ್ ಮತ್ತೆ ಆರಂಭಿಕರಾಗಲು ಒತ್ತಾಯ

ಕೆಎಲ್ ರಾಹುಲ್
ಚೆನ್ನೈ: ಇಂಗ್ಲೆಂಡ್ ವಿರುದ್ಧ ಇದೇ ಚಿಪಾಕ್ ಮೈದಾನದಲ್ಲಿ ಹಿಂದೆ ಕೆಎಲ್ ರಾಹುಲ್ 199 ರನ್ ಹೊಡೆದಿದ್ದನ್ನು ಅಭಿಮಾನಿಗಳು ಇಂದಿಗೂ ಮರೆತಿಲ್ಲ. ಇದೀಗ ಮೊದಲ ಟೆಸ್ಟ್ ಸೋತ ಬಳಿಕ ಟೀಂ ಇಂಡಿಯಾ ಅಭಿಮಾನಿಗಳು ರಾಹುಲ್ ರನ್ನು ಇದೇ ಕಾರಣಕ್ಕೆ ಸ್ಮರಿಸಿಕೊಂಡಿದ್ದಾರೆ.


ಆರಂಭಿಕರಾಗಿ ಕಳೆದ ಕೆಲವು ಪಂದ್ಯಗಳಿಂದ ರೋಹಿತ್ ಶರ್ಮಾ ವಿಫಲರಾಗಿದ್ದಾರೆ. ಹೀಗಾಗಿ ಅವರ ಬದಲಿಗೆ ಕೆಎಲ್ ರಾಹುಲ್ ರನ್ನು ಮತ್ತೆ ಆರಂಭಿಕರಾಗಿ ಕರೆತರಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ರಾಹುಲ್ ಉತ್ತಮ ಫಾರ್ಮ್ ನಲ್ಲಿದ್ದರು. ಒತ್ತಡದ ಪರಿಸ್ಥಿತಿಯಲ್ಲಿ ಸ್ಪಿನ್ ಸ್ನೇಹಿ ಪಿಚ್ ನಲ್ಲಿ ರಾಹುಲ್ ಚೆನ್ನಾಗಿ ಆಡುತ್ತಾರೆ. ಹೀಗಾಗಿ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಲದೀಪ್ ಯಾದವ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ವಿರಾಟ್ ಕೊಹ್ಲಿ