Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಕೆಣಕಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಇಂಗ್ಲೆಂಡ್ ಕ್ರಿಕೆಟಿಗ

ಟೀಂ ಇಂಡಿಯಾ
ಚೆನ್ನೈ: ಟೀಂ ಇಂಡಿಯಾವನ್ನು ಕೆಣಕಲು ಹೋಗಿ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ನೆಟ್ಟಿಗರಿಂದ ಸರಿಯಾಗಿಯೇ ಮಂಗಳಾರತಿ ಮಾಡಿಸಿಕೊಂಡಿದ್ದಾರೆ.


ಇದಕ್ಕೆಲ್ಲಾ ಕಾರಣವಾಗಿದ್ದು ಮೈಕಲ್ ವಾನ್ ಮಾಡಿದ ಒಂದು ಟ್ವೀಟ್. ‘ಹಿಂದೆ ಗಬ್ಬಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯ ಗೆದ್ದ ಬಳಿಕ ಟೀಂ ಇಂಡಿಯಾ ನಥನ್ ಲಿಯೋನ್ ಗೆ 100 ನೇ ಟೆಸ್ಟ್ ಪಂದ್ಯದ ಗೌರವಾರ್ಥ ಸಹಿ ಹಾಕಿದ ಟಿ ಶರ್ಟ್ ನೀಡಿ ಗೌರವಿಸಿದ್ದರು. ಆದರೆ ಈಗ ಜೋ ರೂಟ್ ಗೆ ಟೀಂ ಇಂಡಿಯಾ ಹಾಗೆ ಮಾಡಿಲ್ಲ? ನಿಮಗೆ ಯಾರಿಗಾದರೂ ಗೊತ್ತೇ?’ ಎಂದು ಟೀಂ ಇಂಡಿಯಾ ಬೇಧಭಾವ ಮಾಡಿದೆ ಎಂದು ಕೆಣಕಿದ್ದರು. ಇದು ಭಾರತೀಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ತಲೆಕೆಡಿಸಿಕೊಳ್ಳಬೇಡಿ ವಾನ್ ಅವರೇ, ಟೀಂ ಇಂಡಿಯಾ ಸರಣಿ ಗೆದ್ದ ಬಳಿಕ ರೂಟ್ ರನ್ನು ಟಿ ಶರ್ಟಿ ನೀಡಿ ಗೌರವಿಸಲಿದೆ ಎಂದು ಹಲವರು ತಿರುಗೇಟು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್ ತೆಂಡುಲ್ಕರ್ ಮನೆ ಮುಂದೆ ಜಮಾಯಿಸಿದ ಅಭಿಮಾನಿಗಳು