Publish Date: Sun, 14 Feb 2021 (09:23 IST)
Updated Date: Sun, 14 Feb 2021 (09:24 IST)
ಚೆನ್ನೈ: ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಶತಕ ಭಾರಿಸಿದ ಬೆನ್ನಲ್ಲೇ ನೆಟ್ಟಿಗರು ಅವರನ್ನು ಅಭಿಮಾನದಿಂದಲೇ ಟ್ರೋಲ್ ಮಾಡಿದ್ದಾರೆ.
ರೋಹಿತ್ ರ ಈ ಇನಿಂಗ್ಸ್ ನೋಡಲು ಪತ್ನಿ ರಿತಿಕಾ ಮೈದಾನದಲ್ಲಿದ್ದರು. ಸಾಮಾನ್ಯವಾಗಿ ರೋಹಿತ್ ಸ್ಮರಣೀಯ ಇನಿಂಗ್ಸ್ ಆಡುವಾಗಲೆಲ್ಲಾ ರಿತಿಕಾ ಕಾಕತಾಳೀಯವಾಗಿ ಮೈದಾನದಲ್ಲಿರುತ್ತಾರೆ. ಹೀಗಾಗಿ ನೆಟ್ಟಿಗರು ರೋಹಿತ್ ರನ್ನು ಟ್ರೋಲ್ ಮಾಡಿದ್ದು, ರಿತಿಕಾ ಎದುರಿದ್ದರೆ ರೋಹಿತ್ ಶತಕ ಗಳಿಸೋದು ಪಕ್ಕಾ ಎಂದು ಕಾಲೆಳೆದಿದ್ದಾರೆ. ಮತ್ತೆ ಕೆಲವರು ರೋಹಿತ್ ರಿಂದ ಪತ್ನಿಗೆ ವ್ಯಾಲೆಂಟೈನ್ ಗಿಫ್ಟ್ ಎಂದು ತಮಾಷೆ ಮಾಡಿದ್ದಾರೆ.