ಮುಂಬೈ: ಭಾರತ ಮತ್ತು ಇಂಗ್ಲೆಂಡ್ ನಡುವೆ ಗುಜರಾತ್ ನ ಮೊಟೆರಾದಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯ ವೀಕ್ಷಣೆಗೆ ಪ್ರೇಕ್ಷಕರಿಗೂ ಅವಕಾಶವಿದೆ.
ವಿಶ್ವದ ಬೃಹತ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದ ವೀಕ್ಷಣೆಗೆ ಈಗಾಗಲೇ ಆನ್ ಲೈನ್ ಬುಕಿಂಗ್ ಶುರುವಾಗಿದೆ. ಫೆಬ್ರವರಿ 24 ರಿಂದ ಮೂರನೇ ಟೆಸ್ಟ್ ಆರಂಭವಾಗುತ್ತಿದೆ. ಈ ಪಂದ್ಯಕ್ಕೆ ಅರ್ಧದಷ್ಟು ಪ್ರೇಕ್ಷಕರಿಗೆ ಮೈದಾನದೊಳಕ್ಕೆ ಪ್ರವೇಶ ನೀಡಲಾಗುತ್ತಿದ್ದು, ಬುಕ್ ಮೈ ಶೋ ನಲ್ಲಿ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ.