Select Your Language

Notifications

webdunia
webdunia
webdunia
webdunia

ಭಾರತ-ಇಂಗ್ಲೆಂಡ್ ಟೆಸ್ಟ್: ಆತುರಗಾರರಿಗಲ್ಲ ಚೆನ್ನೈ ಪಿಚ್!

ಭಾರತ-ಇಂಗ್ಲೆಂಡ್ ಟೆಸ್ಟ್: ಆತುರಗಾರರಿಗಲ್ಲ ಚೆನ್ನೈ ಪಿಚ್!
ಚೆನ್ನೈ , ಮಂಗಳವಾರ, 16 ಫೆಬ್ರವರಿ 2021 (09:16 IST)
ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಪಿಚ್ ಬಗ್ಗೆ ಇಂಗ್ಲೆಂಡ್ ಸಮರ್ಥಕರಿಂದ ಸಾಕಷ್ಟು ಟೀಕೆ ಕೇಳಿಬಂದಿದೆ. ಆದರೆ ಮೂರು ದಿನದಾಟ ಮುಗಿಯುವಷ್ಟರಲ್ಲಿ ಈ ಪಿಚ್ ನಲ್ಲಿ ಹೇಗೆ ಆಡಬೇಕೆಂದು ಆಟಗಾರರಿಗೆ ಅರ್ಥವಾಗಿದೆ.


ಪುಟಿದೇಳುತ್ತಿರುವ ಪಿಚ್ ನಲ್ಲಿ ಆಡುವುದು ತುಂಬಾ ಕಷ್ಟ. ಹೀಗಾಗಿ ಇದು ಆತುರಗಾರರಿಗೆ ಹೇಳಿ ಮಾಡಿಸಿದ ಪಿಚ್ ಅಲ್ಲ. ನಿಂತು ಆಡಿ, ಪಿಚ್  ನ ಹದವರಿತು ಅದಕ್ಕೆ ತಕ್ಕಂತೆ ಆಡಿದರೆ ಮಾತ್ರ ಇಲ್ಲಿ ಯಶಸ್ಸು ಸಿಗಬಹುದು. ಅದಕ್ಕೆ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ಕಳೆಯಬೇಕು. ಹೀಗಾಗಿಯೇ ರಿಷಬ್ ಪಂತ್ ರಂತಹ ಹೊಡೆಬಡಿಯ ಆಟಗಾರರು ದ್ವಿತೀಯ ಇನಿಂಗ್ಸ್ ನಲ್ಲಿ ವೈಫಲ್ಯ ಕಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಇಂಗ್ಲೆಂಡ್ ಮೂರನೇ ಟೆಸ್ಟ್ ವೀಕ್ಷಣೆಗೆ ಬುಕಿಂಗ್ ಶುರು