Publish Date: Tue, 02 May 2023 (14:14 IST)
Updated Date: Tue, 02 May 2023 (14:16 IST)
ಲಕ್ನೋ: ನಿನ್ನೆ ಲಕ್ನೋ ಸೂಪರ್ ಜೈಂಟ್ಸ್ ಮೆಂಟರ್ ಗೌತಮ್ ಗಂಭೀರ್ ಜೊತೆಗೆ ನಡೆದಿದ್ದ ಆನ್ ಫೀಲ್ಡ್ ಘರ್ಷಣೆ ಬಗ್ಗೆ ಆರ್ ಸಿಬಿ ಆಟಗಾರ ವಿರಾಟ್ ಕೊಹ್ಲಿ ಪರೋಕ್ಷವಾಗಿ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಗಂಭೀರ್ ಮತ್ತು ಕೊಹ್ಲಿ ನಡುವೆ ಮಾತಿನ ಚಕಮಕಿ ಈಗ ವೈರಲ್ ಆಗಿದೆ. ಇಬ್ಬರಿಗೂ ಬಿಸಿಸಿಐ ದಂಡ ವಿಧಿಸುವ ಮೂಲಕ ಶಿಕ್ಷೆಯನ್ನೂ ನೀಡಿದೆ.
ಇದೀಗ ಕೊಹ್ಲಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ನಾವು ಕೇಳುವುದೆಲ್ಲವೂ ಸತ್ಯವಲ್ಲ, ಅಭಿಪ್ರಾಯವಷ್ಟೇ. ನಾವು ನೋಡುವುದೆಲ್ಲವೂ ನಿಜವಲ್ಲ, ದೃಷ್ಟಿಕೋನವಷ್ಟೇ ಎಂಬ ಸಾಲುಗಳನ್ನು ಬರೆದಿದ್ದಾರೆ.