ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಬೃಹತ್ ಮೊತ್ತ ಚೇಸ್ ಮಾಡುವಾಗ ಪ್ರಯೋಗ ಮಾಡಲು ಹೊರಟು ಕೊಹ್ಲಿ ವಿಫಲರಾದರು ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಸಾಮಾನ್ಯವಾಗಿ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡುತ್ತಾರೆ. ಅವರು ಆ ಕ್ರಮಾಂಕದಲ್ಲಿ ಅದೆಷ್ಟೋ ಪಂದ್ಯಗಳಲ್ಲಿ ಭಾರತಕ್ಕೆ ರನ್ ಚೇಸ್ ಮಾಡಿ ಗೆಲುವು ಕೊಡಿಸಿದ್ದಾರೆ. ಆದರೆ ಮೊದಲ ಟಿ20 ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ತಮ್ಮ ಬದಲು ಕೆಎಲ್ ರಾಹುಲ್ ರನ್ನು ಕಳುಹಿಸಿ ಕೊಹ್ಲಿ ಬಹುದೊಡ್ಡ ತಪ್ಪು ಮಾಡಿದರು ಎಂದು ಗವಾಸ್ಕರ್ ಹೇಳಿದ್ದಾರೆ.
‘ಸರಣಿ ಗೆದ್ದ ಮೇಲೆ ಈ ರೀತ ಪ್ರಯೋಗ ಮಾಡುವುದು ಸರಿ. ಆದರೆ ಮೊದಲ ಪಂದ್ಯದಲ್ಲೇ ರಾಹುಲ್ ಗೆ ಪ್ರಮೋಷನ್ ಕೊಟ್ಟಿದ್ದು ಸರಿಯಲ್ಲ. ಇಂತಹ ಪಂದ್ಯಗಳಲ್ಲಿ ಕೊಹ್ಲಿ ಅದೆಷ್ಟೋ ಬಾರಿ ಕೊನೆಯವರೆಗೆ ನಿಂತು ಆಡಿ ಅದೆಷ್ಟೋ ಬಾರಿ ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆ. ಕೊಹ್ಲಿ ಆರಂಭಿಕರಾಗಿ ಬಂದರೂ ಸರಿಯೇ. ಆದರೆ ಕೆಳ ಕ್ರಮಾಂಕದಲ್ಲಿ ಬರಬಾರದು’ ಎಂದು ಗವಾಸ್ಕರ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.