Publish Date: Fri, 30 Jan 2026 (10:55 IST)
Updated Date: Fri, 30 Jan 2026 (10:58 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಇನ್ ಸ್ಟಾಗ್ರಾಂ ಖಾತೆ ಒಮ್ಮೆ ಡಿ ಆಕ್ಟಿವ್ ಆಗಿ ಮತ್ತೆ ಆಕ್ಟಿವ್ ಆಗಿದ್ದು, ಅಭಿಮಾನಿಗಳು ಕನ್ ಫ್ಯೂಸ್ ಆಗಿದ್ದಾರೆ.
ಅತೀ ಹೆಚ್ಚು ಫಾಲೋವರ್ ಗಳನ್ನು ಹೊಂದಿರುವ ದಾಖಲೆ ಹೊಂದಿರುವ ವಿರಾಟ್ ಕೊಹ್ಲಿ ಇನ್ ಸ್ಟಾಗ್ರಾಂ ಖಾತೆ ನಿನ್ನೆ ಇದ್ದಕ್ಕಿದ್ದಂತೆ ಡಿಲೀಟ್ ಆಗಿತ್ತು. ಇನ್ ಸ್ಟಾಗ್ರಾಂನ ಒಂದು ಪೋಸ್ಟ್ ನಿಂದಲೇ ಕೋಟಿ ಕೋಟಿ ಜೇಬಿಗಿಳಿಸುವ ಕೊಹ್ಲಿ ಯಾಕೆ ತಮ್ಮ ಖಾತೆ ಡಿಲೀಟ್ ಮಾಡಿದ್ರು ಎಂದು ಎಲ್ಲರಿಗೂ ಅಚ್ಚರಿಯಾಗಿತ್ತು.
ಬಹುಶಃ ಕೊಹ್ಲಿ ಸೋಷಿಯಲ್ ಮೀಡಿಯಾದಿಂದ ದೂರವುಳಿಯುವ ನಿರ್ಧಾರ ಮಾಡಿರಬಹುದು ಎಂದು ಫ್ಯಾನ್ಸ್ ಅಂದುಕೊಂಡಿದ್ದರು. ಆದರೆ ಇದಾದ ಕೆಲವೇ ಕ್ಷಣಗಳಲ್ಲಿ ಕೊಹ್ಲಿ ಇನ್ ಸ್ಟಾಗ್ರಾಂ ಖಾತೆ ಮತ್ತೆ ಆಕ್ಟಿವ್ ಆಗಿದೆ.
ಇದು ಅಭಿಮಾನಿಗಳಿಗೆ ಖುಷಿ ತಂದಿದೆ. ಅಷ್ಟಕ್ಕೂ ಕೊಹ್ಲಿ ಇನ್ ಸ್ಟಾಗ್ರಾಂ ಯಾಕೆ ಡಿ ಆಕ್ಟಿವ್ ಆಯ್ತು ಎನ್ನುವುದಕ್ಕೆ ಅವರ ಕಡೆಯಿಂದ ಇದುವರೆಗೆ ಯಾವುದೇ ಉತ್ತರ ಬಂದಿಲ್ಲ. ಆದರೆ ಫ್ಯಾನ್ಸ್ ಮತ್ತೆ ಕೊಹ್ಲಿ ಖಾತೆ ಮತ್ತೆ ಪ್ರತ್ಯಕ್ಷವಾಗಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.