ಮುಂಬೈ: ಕ್ರಿಕೆಟಿಗ ವಿರಾಟ್ ಕೊಹ್ಲಿ ಗ್ಲಾಮರಸ್ ನಟಿ ಅವನೀತ್ ಕೌರ್ ಫೋಟೋಗೆ ಲೈಕ್ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಕೊಹ್ಲಿ ಸ್ಪಷ್ಟನೆ ಕೊಟ್ಟು ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಅಷ್ಟಕ್ಕೂ ಯಡವಟ್ಟಾಗಿದ್ದು ಹೇಗೆ ಇಲ್ಲಿದೆ ನೋಡಿ ವಿವರ.
ವಿರಾಟ್ ಕೊಹ್ಲಿ ಇನ್ ಸ್ಟಾಗ್ರಾಂ ಖಾತೆ ಅವನೀತ್ ಕೌರ್ ಅವರ ಫೋಟೋವೊಂದನ್ನು ಲೈಕ್ ಮಾಡಿರುವ ನೋಟಿಫಿಕೇಷನ್ ನೋಡಿ ಅಭಿಮಾನಿಗಳು ನಿಜಕ್ಕೂ ದಂಗಾಗಿದ್ದರು. ಇದನ್ನು ನೋಡಿದ್ರೆ ಅನುಷ್ಕಾ ಸುಮ್ನೇ ಬಿಡ್ತಾರಾ ಎಂದೂ ಕೆಲವರು ಕಿಚಾಯಿಸಿದ್ದರು.
ಆದರೆ ಇದು ವೈರಲ್ ಆಗುತ್ತಿದ್ದಂತೇ ಕೊಹ್ಲಿ ಸ್ಪಷ್ಟನೆ ಕೊಟ್ಟರು. ನಾನು ಯಾವುದೇ ಪೋಸ್ಟ್ ಲೈಕ್ ಮಾಡಿಲ್ಲ. ಇನ್ ಸ್ಟಾಗ್ರಾಂ ಫೀಡ್ ಕ್ಲಿಯರ್ ಮಾಡುವಾಗ ಅಲ್ಗೋರಿದಮ್ ನಲ್ಲಿರುವ ಸಮಸ್ಯೆಯಿಂದಾಗಿ ಈ ರೀತಿ ಆಗಿರಬಹುದು. ಇದಕ್ಕೆ ಅನ್ಯ ಅರ್ಥ ಕಲ್ಪಿಸಬೇಡಿ ಎಂದು ಕೊಹ್ಲಿ ಸ್ಪಷ್ಟನೆ ನೀಡಿದ್ದರು.
ಇದರ ಬೆನ್ನಲ್ಲೇ ಕೊಹ್ಲಿ ಅಭಿಮಾನಿಗಳು ಮೆಟಾ ಸಿಇಒ ಮಾರ್ಕ್ ಝುಕರ್ ಬರ್ಗ್ ಮತ್ತು ಅವನೀತ್ ಕೌರ್ ಗೆ ಸಂದೇಶಗಳನ್ನು ಕಳುಹಿಸಿದ್ದು ಈ ಯಡವಟ್ಟಿಗೆ ಕ್ಷಮೆ ಯಾಚಿಸುವಂತೆ ಒತ್ತಾಯಿಸುತ್ತಿದ್ದಾರೆ.