Select Your Language

Notifications

webdunia
webdunia
webdunia
webdunia

ಬಣ್ಣದ ಛತ್ರಿ, ಟೋಪಿ.. ಅಬ್ಬಾ ಮಕ್ಕಳು ಕ್ಯಾಮರಾಗೆ ಕಾಣದಂತೆ ಕೊಹ್ಲಿ ದಂಪತಿ ಇಷ್ಟೆಲ್ಲಾ ಕಷ್ಟಪಡಬೇಕಾ

Virat Kohli-Anushka Sharma

Krishnaveni K

ಮುಂಬೈ , ಶನಿವಾರ, 11 ಜನವರಿ 2025 (15:00 IST)
Photo Credit: X
ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ತಮ್ಮ ಇಬ್ಬರು ಮಕ್ಕಳ ಫೋಟೋಗಳನ್ನು ಹಂಚಿಕೊಂಡಿಲ್ಲ. ಇಬ್ಬರನ್ನೂ ಕ್ಯಾಮರಾ ಕಣ್ಣಿಗೆ ಬೀಳದಂತೆ ಕೊಹ್ಲಿ ಮಾಡುವ ಸರ್ಕಸ್ ಅಷ್ಟಿಷ್ಟಲ್ಲ.

ಕೊಹ್ಲಿ ಮತ್ತು ಅನುಷ್ಕಾ ಇಬ್ಬರೂ ಸ್ಟಾರ ಗಳೇ. ಹೀಗಾಗಿ ಎಲ್ಲೇ ಹೋದರೂ ಜನ ಅವರನ್ನು ಮುತ್ತಿಕೊಳ್ಳುತ್ತಾರೆ. ಕೊಹ್ಲಿ ದಂಪತಿ ಮಕ್ಕಳನ್ನು ನೋಡಲೂ ಜನ ಕಾತುರರಾಗಿದ್ದಾರೆ. ಆದರೆ ಇದುವರೆಗೆ ಇಬ್ಬರ ಮುಖ ದರ್ಶನ ಮಾಡಿಸಿಲ್ಲ ಕೊಹ್ಲಿ ದಂಪತಿ.

ತಮ್ಮ ಮಕ್ಕಳನ್ನು ಸದಾ ಕ್ಯಾಮರಾ ಕಣ್ಣುಗಳಿಗೆ ಬೀಳದಂತೆ ಕಾಪಾಡಿಕೊಳ್ಳುತ್ತಾರೆ. ಏರ್ ಪೋರ್ಟ್ ಇರಲಿ, ಮೈದಾನದಲ್ಲಿರಲಿ ಯಾವುದೇ ಸಾರ್ವಜನಿಕ ಸ್ಥಳಗಲ್ಲೂ ತಮ್ಮ ಮಕ್ಕಳು ಮುಖ ಕಾಣದಂತೆ ಮತ್ತು ತೋರಿಸಿದಂತೆ ಕ್ಯಾಮರಾ ಮ್ಯಾನ್ ಗಳಿಗೂ ಮನವಿ ಮಾಡುತ್ತಿರುತ್ತಾರೆ. ಆಸ್ಟ್ರೇಲಿಯಾ ಪ್ರವಾಸದ ವೇಳೆಯೂ ಮಾಧ್ಯಮಗಳೊಂದಿಗೆ ಕೊಹ್ಲಿ ಮಕ್ಕಳ ವಿಡಿಯೋ ಮಾಡದಂತೆ ಕಿತ್ತಾಡಿದ್ದರು.

ಇದು ಎಷ್ಟರಮಟ್ಟಿಗೆ ಎಂದರೆ ಕೊಹ್ಲಿ ದಂಪತಿ ನಿನ್ನೆ ವೃಂದಾವನಕ್ಕೆ ಭೇಟಿ ನೀಡಿದಾಗಲೂ ಮುಂದುವರಿದಿದೆ. ಕೊಹ್ಲಿ ದಂಪತಿ ಮಕ್ಕಳನ್ನು ಎತ್ತಿಕೊಂಡು ವಿಮಾನ ನಿಲ್ದಾಣದಲ್ಲಿ ಬರುವಾಗ ಮತ್ತದೇ ಪ್ರಾಬ್ಲಂ ಆಗಿದೆ. ಕ್ಯಾಮರಾಗಳು ಕೊಹ್ಲಿ ಮಕ್ಕಳ ಕಡೆಗೆ ಫೋಕಸ್ ಮಾಡಬಹುದು ಎಂದು ಅವರ ಭದ್ರತಾ ಸಿಬ್ಬಂದಿಗಳು ಬಣ್ಣ ಬಣ್ಣದ ಛತ್ರಿಗಳನ್ನೇ ಹಿಡಿದು ನಿಂತಿದ್ದರು. ಛತ್ರಿಯನ್ನೇ ಕೊಹ್ಲಿ ಮಕ್ಕಳಿಗೆ ಅಡ್ಡಲಾಗಿ ಹಿಡಿದು ಅವರು ಕಾರು ಏರಿದ ಬಳಿಕವೇ ಛತ್ರಿ ಪಕ್ಕಕ್ಕಿಟ್ಟಿದ್ದಾರೆ. ಇದನ್ನು ನೋಡಿ ಕೆಲವು ನೆಟ್ಟಿಗರು ಈ ದಂಪತಿ ಮಕ್ಕಳನ್ನು ಈ ಥರಾ ಕರೆದುಕೊಂಡು ಹೋಗುವಂತೆ ಮಾಡಿದ ಪಪ್ಪಾರಾಜಿಗಳಿಗೆ ಹಿಡಿಶಾಪ ಹಾಕಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

IPL 2025: ಆರ್‌ಸಿಬಿ ತಂಡಕ್ಕೆ ಸಾರಥಿ ಯಾರು: ಕೋಚ್ ಆ್ಯಂಡಿ ಫ್ಲವರ್ ನೀಡಿದ್ರು ಮಹತ್ವದ ಸುಳಿವು