Select Your Language

Notifications

webdunia
webdunia
webdunia
webdunia

ಹೃದಯಾಘಾತದಿಂದ ಮೂರನೇ ತರಗತಿ ವಿದ್ಯಾರ್ಥಿನಿ ಸಾವು

ಹೃದಯಾಘಾತದಿಂದ ಮೂರನೇ ತರಗತಿ ವಿದ್ಯಾರ್ಥಿನಿ ಸಾವು

Sampriya

ಅಹಮದಾಬಾದ್‌ , ಶುಕ್ರವಾರ, 10 ಜನವರಿ 2025 (19:58 IST)
Photo Courtesy X
ಅಹಮದಾಬಾದ್‌: ಈ ವಾರದ ಆರಂಭದಲ್ಲಿ ಚಾಮರಾಜನಗರದ ಎಂಟು ವರ್ಷದ ವಿದ್ಯಾರ್ಥಿಯೊಬ್ಬರು ಕುಸಿದು ಬಿದ್ದು ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದ ಬೆನ್ನಲ್ಲೇ ಇದೇ ರೀತಿಯ ಘಟನೆ ಅಹಮದಾಬಾದ್‌ನ ಥಾಲ್ರೇಜ್‌ ಪ್ರದೇಶದಲ್ಲಿ ನಡೆದಿದೆ.

ಶುಕ್ರವಾರ ಬೆಳಗ್ಗೆ ಅಹಮದಾಬಾದ್‌ನ ಥಾಲ್ತೇಜ್ ಪ್ರದೇಶದ ಝೆಬಾರ್ ಶಾಲೆಯಲ್ಲಿ ಕುರ್ಚಿಯಲ್ಲಿ ಕುಳಿತಿದ್ದ ಬಾಲಕಿಯೊಬ್ಬಳು ಕುಸಿದುಬಿದ್ದು ಸಾವನ್ನಪ್ಪಿದ್ದಾಳೆ. ಮೃತ ಬಾಲಕಿಯನ್ನು ಗಾರ್ಗಿ ರಣಪಾರಾ ಎಂದು ಗುರುತಿಸಲಾಗಿದೆ.

3 ನೇ ತರಗತಿಯಲ್ಲಿ ಓದುತ್ತಿರುವ ಎಂಟು ವರ್ಷದ ಬಾಲಕಿ ಶುಕ್ರವಾರ ಗುಜರಾತ್‌ನ ಅಹಮದಾಬಾದ್‌ನ ತನ್ನ ಶಾಲೆಯಲ್ಲಿ ಸಾವನ್ನಪ್ಪಿದ್ದಾಳೆ.

ಗಾರ್ಗಿ ರಣಪಾರಾ ಎಂದು ಗುರುತಿಸಲಾದ ಬಾಲಕಿ ಥಾಲ್ತೇಜ್ ಪ್ರದೇಶದಲ್ಲಿನ ಮಕ್ಕಳಿಗಾಗಿ ಝೆಬಾರ್ ಶಾಲೆಯಲ್ಲಿ ಬೆಳಿಗ್ಗೆ ಕುಸಿದು ಬಿದ್ದಿದ್ದಾಳೆ. ಆಕೆಯ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

"ಬೆಳಿಗ್ಗೆ ತನ್ನ ತರಗತಿಯ ಕಡೆಗೆ ಹೋಗುತ್ತಿದ್ದಾಗ ಲಾಬಿಯಲ್ಲಿ ಕುರ್ಚಿಯ ಮೇಲೆ ಕುಳಿತುಕೊಂಡ ನಂತರ ಹುಡುಗಿ ಪ್ರಜ್ಞೆ ತಪ್ಪಿದಳು" ಎಂದು ಶಾಲೆಯ ಪ್ರಾಂಶುಪಾಲರಾದ ಶರ್ಮಿಷ್ಠಾ ಸಿನ್ಹಾ ಅವರು ತಿಳಿಸಿದ್ದಾರೆ.

ಈ ವಾರದ ಆರಂಭದಲ್ಲಿ ಇದೇ ರೀತಿಯ ಘಟನೆಯಲ್ಲಿ, ಬೆಂಗಳೂರಿನಿಂದ 160 ಕಿಮೀ ದೂರದಲ್ಲಿರುವ ಚಾಮರಾಜನಗರದ ಎಂಟು ವರ್ಷದ ವಿದ್ಯಾರ್ಥಿಯೊಬ್ಬರು ಕುಸಿದು ಬಿದ್ದು ಹೃದಯ ಸ್ತಂಭನದಿಂದ ಸಾವನ್ನಪ್ಪಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಕಾರ್ಯಕರ್ತೆ ಶಕುಂತಲಾ ಪುತ್ರ ಆತ್ಮಹತ್ಯೆ, ಡೆತ್‌ನೋಟ್‌ ಪತ್ತೆ