ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಸಂಸಾರ ಸಮೇತ ಮುಂದೆ ಲಂಡನ್ ನಲ್ಲಿ ನೆಲೆಯೂರಲಿದ್ದಾರೆ ಎಂಬ ಸುದ್ದಿಗಳಿತ್ತು. ಆದರೆ ಲಂಡನ್ ನಲ್ಲಿ ಅಲ್ಲ ಮುಂಬೈನ ಈ ಜಾಗದಲ್ಲಿ ಕೊಹ್ಲಿ ಸೆಟಲ್ ಆಗಲಿದ್ದಾರೆ ಎನ್ನಲಾಗುತ್ತಿದೆ.
ಪುತ್ರ ಅಕಾಯ್ ಜನಿಸಿದ ಮೇಲೆ ಕೊಹ್ಲಿ ಹೆಚ್ಚಾಗಿ ಪತ್ನಿ ಮಕ್ಕಳ ಜೊತೆ ಲಂಡನ್ ನಲ್ಲಿಯೇ ನೆಲೆಸಿದ್ದರು. ಹೀಗಾಗಿ ಮುಂದೆ ಅವರು ಶಾಶ್ವತವಾಗಿಯೇ ಅವರು ಅಲ್ಲಿಯೇ ನೆಲೆಸಲಿದ್ದಾರೆ ಎಂದು ಸುದ್ದಿಯಾಗಿತ್ತು.
ಆದರೆ ಇದೀಗ ವಿರಾಟ್ ಕೊಹ್ಲಿ ದಂಪತಿ ಆಲಿಭಾಗ್ ನಲ್ಲಿರುವ ತಮ್ಮ ಫಾರ್ಮ್ ಹೌಸ್ ನ ಗೃಹಪ್ರವೇಶ ಸಮಾರಂಭಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಮುಂಬೈನಲ್ಲಿರುವ ಕೊಹ್ಲಿ ದಂಪತಿ ಈಗ ಆಲಿಭಾಗ್ ಬಂಗಲೆಗೆ ಭೇಟಿ ನೀಡುತ್ತಿದ್ದಾರೆ.
ಇದನ್ನೆಲ್ಲಾ ನೋಡುತ್ತಿದ್ದರೆ ಕೊಹ್ಲಿ ನಿವೃತ್ತಿ ಬಳಿಕ ಇಲ್ಲಿಯೇ ಸೆಟಲ್ ಆಗುವ ಯೋಜನೆ ಹೊಂದಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆಂದೇ ಕೊಹ್ಲಿ ಬಹುಕೋಟಿ ವೆಚ್ಚ ನೀಡಿ ಪ್ರಕೃತಿ ಮಧ್ಯೆಯಿರುವ ಈ ಬಂಗಲೆಯನ್ನು ಖರೀದಿಸಿದ್ದರು ಎನ್ನಲಾಗಿದೆ.