ಮುಂಬೈ: ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಒಂದೇ ಸಮಯಕ್ಕೆ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾದ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ತಂಡ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಇಬ್ಬರೂ ಬ್ರದರ್ಸ್ ಫ್ರಂ ಎನದರ್ ಮದರ್ ಎಂದು ಬಣ್ಣಿಸಿದೆ.
ಟೀಂ ಇಂಡಿಯಾ ಸಮಕಾಲೀನ ದಿಗ್ಗಜ ಕ್ರಿಕೆಟಿಗರು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ. ಇಬ್ಬರೂ ಒಂದೇ ಸಮಯಕ್ಕೆ ಟಿ20 ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. ಇದೀಗ ಟೆಸ್ಟ್ ಕ್ರಿಕೆಟ್ ಗೂ ಒಂದೇ ಸಮಯಕ್ಕೆ ವಿದಾಯ ಹೇಳಿದ್ದಾರೆ.
ಮೊನ್ನೆಯಷ್ಟೇ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಹೇಳಿದ್ದರು. ಇದೀಗ ಎರಡೇ ದಿನದ ಅಂತರದಲ್ಲಿ ಕೊಹ್ಲಿ ಕೂಡಾ ವಿದಾಯ ಹೇಳಿದ್ದಾರೆ. ಇಬ್ಬರೂ ಒಂದೇ ಸಮಯಕ್ಕೆ ನಿವೃತ್ತಿಯಾಗಿರುವುದರಿಂದ ಟೀಂ ಇಂಡಿಯಾಕ್ಕೆ ದೊಡ್ಡ ಶೂನ್ಯ ಆವರಿಸಲಿದೆ.
ಇದೇ ಕಾರಣಕ್ಕೆ ಭಾರತೀಯ ಕ್ರಿಕೆಟ್ ತಂಡ ಭಾವುಕ ಪೋಸ್ಟ್ ಮಾಡಿದೆ. ಇಬ್ಬರೂ ಬ್ರದರ್ಸ್ ಫ್ರಂ ಎನದರ್ ಮದರ್. ಇಬ್ಬರೂ ಭಾರತೀಯ ಕ್ರಿಕೆಟ್ ರಂಗಕ್ಕೆ ನೀಡಿದ ಕೊಡುಗೆಗೆ ಧನ್ಯವಾದ ಎಂದು ವಿದಾಯದ ಸಂದೇಶ ನೀಡಿದೆ.