Daily Horoscope

Select Your Language

Notifications

webdunia
webdunia
webdunia
webdunia

ಎರಡು ವರ್ಷದ ನಂತರ ಟ್ರೈನಿಂಗ್ ಫೋಟೋ ಹಂಚಿಕೊಂಡ ಕೊಹ್ಲಿ: ಅಷ್ಟಕ್ಕೂ ಕಿಂಗ್ ಹಂಚಿಕೊಳ್ಳದೇ ಇದ್ದಿದ್ದು ಯಾಕೆ

Virat Kohli
Photo Credit: X
ವಡೋದರಾ: ಬರೋಬ್ಬರಿ ಎರಡು ವರ್ಷಗಳ ಬಳಿಕ ವಿರಾಟ್ ಕೊಹ್ಲಿ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಟ್ರೈನಿಂಗ್ ನಡೆಸುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಅವರ ನಿಲ್ಲಿಸಿದ್ದು ಯಾಕೆ? ಇದರ ಹಿಂದಿದೆ ಕಾರಣ.

ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯವಾಡಲು ಕೊಹ್ಲಿ ವಡೋದರಾದಲ್ಲಿದ್ದಾರೆ. ನಿನ್ನೆ ನೆಟ್ಸ್ ನಲ್ಲಿ ಕಠಿಣ ತರಬೇತಿ ನಡೆಸಿದ್ದಾರೆ. ಈ ಸಂದರ್ಭದ  ಚಿತ್ರಗಳನ್ನು ಅವರು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದು ಅನೇಕರಿಗೆ ಸರ್ಪೈಸ್ ಆಗಿದೆ.

ಯಾಕೆಂದರೆ ಕೊಹ್ಲಿ ಇತ್ತೀಚೆಗಿನ ಕೆಲವು ಸಮಯದಿಂದ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಭಾರತ ತಂಡಕ್ಕೆ ಅಭ್ಯಾಸ ನಡೆಸುತ್ತಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಳ್ಳುತ್ತಿರಲಿಲ್ಲ.

ಅಷ್ಟಕ್ಕೂ ಕೊಹ್ಲಿ ಫೋಟೋ ಹಂಚಿಕೊಳ್ಳದೇ ಇರುವುದಕ್ಕೆ ಕಾರಣವೂ ಇದೆ. ಕೆಲವು ಸಮಯದ ಹಿಂದೆ ಕೊಹ್ಲಿ ತಮ್ಮ ಯೋ ಯೋ ಟೆಸ್ಟ್ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು. ಆಗ ಯೋ ಯೋ ಟೆಸ್ಟ್ ಬಹಿರಂಗಪಡಿಸದಂತೆ ಬಿಸಿಸಿಐ ಅಸಮಾಧಾನ ವ್ಯಕ್ತಪಡಿಸಿತ್ತು. ಇದಾದ ಬಳಿಕ ಕೊಹ್ಲಿ ಯಾವುದೇ ಅಭ್ಯಾಸದ ಫೋಟೋಗಳನ್ನೂ ಹಂಚಿಕೊಳ್ಳುತ್ತಿರಲಿಲ್ಲ. ಆದರೆ ಇದು ನ್ಯೂ ಇಯರ್ ಸರ್ಪೈಸ್ ಎಂದು ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಡಬ್ಲ್ಯುಪಿಎಲ್ 2026 ಇಂದಿನಿಂದ ಶುರು: ಆರ್ ಸಿಬಿ ವರ್ಸಸ್ ಮುಂಬೈ ಪಂದ್ಯ ಶುರು ಎಷ್ಟೊತ್ತಿಗೆ