Select Your Language

Notifications

webdunia
webdunia
webdunia
Sunday, 13 April 2025
webdunia

ಪತ್ನಿ ಅನುಷ್ಕಾಗೆ ಕ್ರೆಡಿಟ್ ಕೊಟ್ಟ ವಿರಾಟ್ ಕೊಹ್ಲಿ : ಗಂಡ ಅಂದ್ರೆ ಹೀಗಿರ್ಬೇಕು ಎಂದ ಫ್ಯಾನ್ಸ್

Virat Kohli

Krishnaveni K

ಮುಂಬೈ , ಶುಕ್ರವಾರ, 31 ಮೇ 2024 (14:14 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾರನ್ನು ಯಾವತ್ತೂ ಬಿಟ್ಟುಕೊಡಲ್ಲ. ಇವರಿಬ್ಬರು ಇದೇ ಕಾರಣಕ್ಕೆ ಐಡಿಯಲ್ ಕಪಲ್ ಎನಿಸಿಕೊಂಡಿದ್ದಾರೆ.

ಇದೀಗ ಟಿ20 ವಿಶ್ವಕಪ್ ಗೆ ತೆರಳುವ ಮುನ್ನ ವಿರಾಟ್ ಕೊಹ್ಲಿ ಪಪ್ಪರಾಜಿಗಳಿಗೆ ನೀಡಿದ ಪ್ರತಿಕ್ರಿಯೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ಪುತ್ರ ಅಕಾಯ್ ಜನನದ ಬಳಿಕ ಅನುಷ್ಕಾ ಮೊದಲ ಬಾರಿಗೆ ಮಕ್ಕಳೊಂದಿಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಪಪ್ಪರಾಜಿಗಳಲ್ಲಿ ಮಕ್ಕಳ ಫೋಟೋ ತೆಗೆಯದಂತೆ ಮನವಿ ಮಾಡಿದ್ದರು.

ಅದರಂತೆ ಪಪ್ಪಾರಾಜಿಗಳು ಮಕ್ಕಳ ಫೋಟೋ ರಿವೀಲ್ ಮಾಡಿರಲಿಲ್ಲ. ಇದೇ ಕಾರಣಕ್ಕೆ ಅನುಷ್ಕಾ ಪಪ್ಪಾರಾಜಿಗಳಿಗೆ ಸಿಹಿ ತಿನಿಸಿನ ಗಿಫ್ಟ್ ಬಾಕ್ಸ್ ನೀಡಿದ್ದರು. ಈ ಉಡುಗೊರೆ ಬಗ್ಗೆ ವಿರಾಟ್ ಬಳಿ ಪ್ರಸ್ತಾಪಿಸಿದ ಪಪ್ಪಾರಾಜಿಗಳು ನಿನ್ನೆ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕೊಹ್ಲಿ, ಉಡುಗೊರೆ ನೀಡಿದ್ದು ನಾನಲ್ಲ, ಅನುಷ್ಕಾ ಎಂದಿದ್ದಾರೆ. ಕೊಹ್ಲಿಯ ವರ್ತನೆಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಗಂಡ ಎಂದರೆ ಹೀಗಿರಬೇಕು. ತನ್ನ ಪತ್ನಿ ಮಾಡಿದ ಕೆಲಸದ ಕ್ರೆಡಿಟ್ ಯಾವುದೇ ಪ್ರತಿಷ್ಠೆಯನ್ನೂ ತೋರಿಸಿಕೊಳ್ಳದೇ ಅವರಿಗೇ ನೀಡುತ್ತಿದ್ದಾರೆ ಎಂದು ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಯ ಟಿ20 ವಿಶ್ವಕಪ್ ಗೆ ಸಜ್ಜಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ