Select Your Language

Notifications

webdunia
webdunia
webdunia
webdunia

ಟಿ20 ವಿಶ್ವಕಪ್ ಗೆ ತಂಡದ ಜೊತೆ ಹೋಗದೇ ಮುಂಬೈನಲ್ಲಿ ಪಾರ್ಟಿ ಮಾಡಿದ ವಿರಾಟ್ ಕೊಹ್ಲಿ

kohli party

Krishnaveni K

ಮುಂಬೈ , ಬುಧವಾರ, 29 ಮೇ 2024 (11:27 IST)
Photo Credit: X
ಮುಂಬೈ: ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ಮೊದಲ ಬ್ಯಾಚ್ ನೊಂದಿಗೆ ತೆರಳದೇ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮುಂಬೈನಲ್ಲಿ ಪತ್ನಿ ಅನುಷ್ಕಾ, ಗೆಳೆಯರೊಂದಿಗೆ ಪಾರ್ಟಿ ಮಾಡಿದ್ದಾರೆ.

ಇತ್ತೀಚೆಗಷ್ಟೇ ರೋಹಿತ್ ಶರ್ಮಾ ನೇತೃತ್ವದಲ್ಲಿ ಬಹುತೇಕ ಕ್ರಿಕೆಟಿಗರು ಟಿ20 ವಿಶ್ವಕಪ್ ನಲ್ಲಿ ಭಾಗಿಯಾಗಲು ಅಮೆರಿಕಾಗೆ ಪ್ರಯಾಣ ಬೆಳೆಸಿದ್ದರು. ಆದರೆ ಈ ತಂಡದಲ್ಲಿ ವಿರಾಟ್ ಕೊಹ್ಲಿ ಇರಲಿಲ್ಲ. ಅವರು ಜೂನ್ 1 ರ ಅಭ್ಯಾಸ ಪಂದ್ಯದ ವೇಳೆಗೆ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎನ್ನಲಾಗಿತ್ತು.

ಇದೀಗ ಕೊಹ್ಲಿ ಮುಂಬೈನಲ್ಲಿಯೇ ಇದ್ದಾರೆ. ಪತ್ನಿ ಅನುಷ್ಕಾ, ಗೆಳೆಯರ ಬಳಗದ ಜೊತೆ ಡಿನ್ನರ್ ಪಾರ್ಟಿ ಮಾಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಟಿ20 ವಿಶ್ವಕಪ್ ಗೆ ತೆರಳುವ ಮುನ್ನ ಕೊಹ್ಲಿ ಗೆಳೆಯರೊಂದಿಗೆ ಪಾರ್ಟಿ ಮಾಡಿದ್ದಾರೆ. ಕೊಹ್ಲಿ ಆಪ್ತರಾಗಿರುವ ಮಾಜಿ ಕ್ರಿಕೆಟಿಗ ಜಹೀರ್ ಖಾನ್, ಪತ್ನಿ ಸಾಗರಿಕಾ ಘಾಟೆ, ಗೌರವ್ ಕಪೂರ್ ಸೇರಿದಂತೆ ಆತ್ಮೀಯರು ಈ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟಿಗ ರಿಯಾನ್ ಪರಾಗ್ ಯೂ ಟ್ಯೂಬ್ ಸರ್ಚ್ ಲಿಸ್ಟ್ ಸಖತ್ ಹಾಟ್ ಮಗಾ