Select Your Language

Notifications

webdunia
webdunia
webdunia
webdunia

ಆರ್‌ಸಿಬಿ ಗೆಲ್ಲುತ್ತಿದ್ದಂತ್ತೆ ಪತ್ನಿ ಅನುಷ್ಕಾ ನೋಡಿ ಆನಂದಬಾಸ್ಪ ಸುರಿಸಿದ ಕೊಹ್ಲಿ

Anushka Sharma

Sampriya

ಬೆಂಗಳೂರು , ಭಾನುವಾರ, 19 ಮೇ 2024 (10:49 IST)
Photo Courtesy X
ಬೆಂಗಳೂರು:  'ಮಾಡು ಇಲ್ಲವೆ ಮಡಿ' ಎಂಬಂತ್ತಿದ್ದ ನಿನ್ನೆ ನಡೆದ ಐಪಿಎಲ್ ನಿರ್ಣಾಯಕ ಪಂದ್ಯಾಟದಲ್ಲಿ ಆರ್‌ಸಿಬಿ ಗೆಲುವು ಸಾಧಿಸುತ್ತಿದ್ದಂತ್ತೆ ವಿರಾಟ್ ಕೊಹ್ಲಿ ಮೈದಾನದಲ್ಲೇ ಅಬ್ಬರಿಸಿ, ಭಾವುಕರಾದರು. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ಹೈವೋಲ್ಟ್‌ಜ್ ಪಂದ್ಯದಲ್ಲಿ ಪ್ಲೇ ಆಫ್ ತಲುಪಲು ಆರ್‌ಸಿಬಿ ತಂಡ ಸಿಎಸ್‌ಕೆ ವಿರುದ್ಧದ ಪಂದ್ಯವನ್ನು ಕನಿಷ್ಠ 18ರನ್ ಅಥವಾ 11 ಎಸೆತಗಳಿಂದ ಗೆಲ್ಲಬೇಕಿತ್ತು. ಈ ಪಂದ್ಯವನ್ನು ಆರ್‌ಸಿವಿ 27ರನ್‌ಗಳಿಂದ ಗೆದ್ದುಕೊಳ್ಳುವ ಮೂಲಕ ರೋಚಕ ಜಯ ಸಾಧಿಸಿತು.  ಸತತ ಸೋಲಿನ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಆರ್‌ಸಿಬಿ ಈ ರೀತಿ ಕಮ್‌ಬ್ಯಾಕ್ ಮಾಡುತ್ತೆ ಎಂದು ಯಾರೂ ಊಹಿಸಿರಲಿಲ್ಲ.  ಪ್ಲೇ ಆಫ್ ಪ್ರವೇಶಿಸಿದ ಖುಷಿಯಲ್ಲಿ ತಂಡದ ಆಟಗಾರರೂ ಅದರಲ್ಲೂ ವಿರಾಟ್ ಕೊಹ್ಲಿ ಭಾವುಕರಾದರು.

ಆರ್‌ಸಿಬಿ ಊಹಿಸಲಾಗದ ಗೆಲುವು ಪಡೆದುಕೊಳ್ಳುವ ಮೂಲಕ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು.

ಗೆದ್ದ ತಕ್ಷಣ ವಿರಾಟ್ ಅವರು ಮೈದಾನದಲ್ಲಿ ಓಡಿ ಹೋಗಿ ಸಹ ಆಟಗಾರರನ್ನು ತಬ್ಬಿಕೊಂಡು ಸಂಭ್ರಮಿಸಿದರು. ಅದಲ್ಲದೆ ಸ್ಟೇಡಿಯಂನತ್ತ ನೋಡಿ ಇನ್ನು ಜೋರಾಗಿ ಕಿರುಚಿ ಎಂದು ಸನ್ನೆ ಕೊಟ್ಟರು.  ಬಳಿಕ ಮೈದಾನದಲ್ಲಿ ಒಬ್ಬರೇ ಗೆಲುವನ್ನು ಆನಂದಿಸಿದ ವಿರಾಟ್ ಕಣ್ಣೀರು ಹಾಕಿದರು.  ಇದನ್ನು ನೋಡಿದ ಅನುಷ್ಕಾ ಅವರೂ ಕೂಡ ಕಣ್ಣೀರು ಹಾಕಿದರು. ಇವರಿಬ್ಬರ ಭಾವನೆಗಳು ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್‌ಸಿಬಿಯನ್ನು ಹುರಿದುಂಬಿಸಿದಲು ಮೊದಲ ಬಾರಿ ಸ್ಟೇಡಿಯಂಗೆ ಕಾಲಿಟ್ಟ ರಿಷಭ್ ಶೆಟ್ಟಿ