Select Your Language

Notifications

webdunia
webdunia
webdunia
webdunia

ಏಷ್ಯಾ ಕಪ್: ಮೂರು ವರ್ಷದ ವನವಾಸ ಅಂತ್ಯ, ಕಿಂಗ್ ಕೊಹ್ಲಿ ಶತಕ

ಏಷ್ಯಾ ಕಪ್: ಮೂರು ವರ್ಷದ ವನವಾಸ ಅಂತ್ಯ, ಕಿಂಗ್ ಕೊಹ್ಲಿ ಶತಕ
ದುಬೈ , ಗುರುವಾರ, 8 ಸೆಪ್ಟಂಬರ್ 2022 (21:02 IST)
ದುಬೈ: ಮೂರು ವರ್ಷಗಳಿಂದ ಶತಕದ ಬರ ಎದುರಿಸುತ್ತಿದ್ದ ಕಿಂಗ್ ಕೊಹ್ಲಿ ಇಂದು ಕೊನೆಗೂ ಆ ಬರ ನೀಗಿಸಿದರು. ಅಫ್ಘಾನಿಸ್ತಾನ ವಿರುದ್ಧ ತಮ್ಮ ಎಂದಿನ ಅಧಿಕಾರಯುತ ಶೈಲಿಯಲ್ಲಿ ಬ್ಯಾಟ್ ಬೀಸಿ ಭರ್ಜರಿ ಶತಕ ಗಳಿಸಿದರು.

2019 ರ ನವಂಬರ್ ನಲ್ಲಿ ಕೊನೆಯ ಬಾರಿಗೆ ಅವರು ಶತಕ ಗಳಿಸಿದ್ದರು. ಅದಾದ ಬಳಿಕ ಸತತ ಬ್ಯಾಟಿಂಗ್ ವೈಫಲ್ಯ ಶತಕದ ಬರಗಾಲ ಎದುರಿಸುತ್ತಿದ್ದ ಕೊಹ್ಲಿ ಇಂದು ತಮ್ಮ ಮೇಲಿದ್ದ ಅಪವಾದ ನೀಗಿಸಿಕೊಂಡರು. ಬೌಂಡರಿ ಮೂಲಕ ಶತಕ ದಾಟಿದಾಗ ಅವರ ಮುಖದಲ್ಲಿ ಆ ನೆಮ್ಮದಿ, ತೃಪ್ತಿ ಎದ್ದು ಕಾಣುತ್ತಿತ್ತು.

ತಮ್ಮ ತಂದೆಯ ನೆನಪಿನ ಸರ ಹೊರಗೆಳೆದು ಮುತ್ತಿಕ್ಕಿದ ಕೊಹ್ಲಿ ಮೊದಲ ಶತಕ ಗಳಿಸಿದವರಂತೆ, ಇಷ್ಟು ದಿನ ತಮ್ಮೊಳಗಿದ್ದ ಎಲ್ಲಾ ಭಾರ ಹೊರ ಹಾಕಿದಂತೆ ನೆಮ್ಮದಿಯ ನಗೆ ಚೆಲ್ಲಿದರು. ಇಡೀ ಕ್ರೀಡಾಂಗಣವೇ ಅವರಿಗೆ ಎದ್ದು ನಿಂತು ಗೌರವ ಸಲ್ಲಿಸಿತು. ಕೊನೆಗೆ ಅವರು 61 ಎಸೆತಗಳಿಂದ 12 ಬೌಂಡರಿ 6 ಸಿಕ್ಸರ್ ಸಹಿತ ಅಜೇಯ 122 ರನ್ ಗಳಿಸಿದರು. ಭಾರತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿದರು. ಇದರಲ್ಲಿ ನಾಯಕ ಕೆಎಲ್ ರಾಹುಲ್ 62 ರನ್ ಗಳ ಕೊಡುಗೆಯೂ ಸೇರಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾ ಕಪ್ ಕ್ರಿಕೆಟ್: ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯದಲ್ಲಿ ಟೀಂ ಇಂಡಿಯಾಗೆ ಕೆಎಲ್ ರಾಹುಲ್ ನಾಯಕ