Publish Date: Thu, 08 Sep 2022 (09:10 IST)
Updated Date: Thu, 08 Sep 2022 (18:52 IST)
ದುಬೈ: ಏಷ್ಯಾ ಕಪ್ ನಲ್ಲಿ ಪಾಕಿಸ್ತಾನ ತಂಡ ಸೂಪರ್ ಫೋರ್ ಹಂತದ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು 1 ವಿಕೆಟ್ ನಿಂದ ರೋಚಕವಾಗಿ ಸೋಲಿಸಿ ಫೈನಲ್ ತಲುಪಿದೆ. ಇತ್ತ ಪಾಕ್ ಗೆಲ್ಲುತ್ತಿದ್ದಂತೇ ಟೀಂ ಇಂಡಿಯಾ ಫೈನಲ್ ಕನಸು ಭಗ್ನವಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಪಾಕ್ 19.2 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿ ಗೆಲುವು ಕಂಡಿತು. ಕೊನೆಯ ಓವರ್ ನಲ್ಲಿ 11 ರನ್ ಬೇಕಾಗಿದ್ದಾಗ ನಸೀಂ ಶಾ ಸತತ ಎರಡು ಸಿಕ್ಸರ್ ಸಿಡಿಸಿ ಗೆಲುವಿನ ದಡ ಮುಟ್ಟಿಸಿದರು.
ಪಾಕಿಸ್ತಾನ ರೋಚಕವಾಗಿ ಗೆಲ್ಲುತ್ತಿದ್ದಂತೇ ರೊಚ್ಚಿಗೆದ್ದ ಅಫ್ಘಾನಿಸ್ತಾನ ಅಭಿಮಾನಿಗಳು ಕುರ್ಚಿ ಎತ್ತಿ ಬಡಿದಾಡಿಕೊಂಡರು. ಇತ್ತ ಟೀಂ ಇಂಡಿಯಾ ಕೂಡಾ ಫೈನಲ್ ಕನಸು ಭಗ್ನವಾಗಿದ್ದಕ್ಕೆ ನಿರಾಸೆ ಅನುಭವಿಸಿತು.