ದುಬೈ: ಏಷ್ಯಾ ಕಪ್ ನಲ್ಲಿ ಭಾರತ ಇಂದು ಸೂಪರ್ ಫೋರ್ ಹಂತದ ಕೊನೆಯ ಪಂದ್ಯವನ್ನು ಅಫ್ಘಾನಿಸ್ತಾನ ವಿರುದ್ಧ ಆಡಲಿದೆ.
ಟೀಂ ಇಂಡಿಯಾ ಕಳೆದ ಎರಡೂ ಸೂಪರ್ ಫೋರ್ ಹಂತದ ಪಂದ್ಯಗಳನ್ನು ಸೋತಿರುವುದರಿಂದ ಫೈನಲ್ ಕನಸು ಕ್ಷೀಣವಾಗಿದೆ. ಒಂದು ವೇಳೆ ಭಾರತ ಫೈನಲ್ ಗೇರಬೇಕಾದರೆ ಪಾಕಿಸ್ತಾನ ಲಂಕಾ, ಅಫ್ಘಾನಿಸ್ತಾನ ವಿರುದ್ಧ ಸೋಲಬೇಕು. ಅದು ಅಸಾಧ‍್ಯವಾಗಿರುವುದರಿಂದ ಭಾರತಕ್ಕೆ ಈ ಪಂದ್ಯ ಔಪಚಾರಿಕವಾಗುವ ಸಾಧ‍್ಯತೆಯಿದೆ.
ಕಳೆದ ಎರಡು ಪಂದ್ಯಗಳಲ್ಲಿ ತಂಡದ ಆಯ್ಕೆಯೇ ಎಲ್ಲರ ಟೀಕೆಗೆ ಗುರಿಯಾಗಿದೆ. ಹೀಗಾಗಿ ದಿನೇಶ್ ಕಾರ್ತಿಕ್ ರನ್ನು ಮತ್ತೆ ಆಡುವ ಬಳಗದಲ್ಲಿ ಸೇರಿಸಿಕೊಳ್ಳಬಹುದು. ಜ್ವರದಿಂದ ಬಳಲುತ್ತಿದ್ದ ಆವೇಶ್ ಖಾನ್ ಮತ್ತೆ ತಂಡಕ್ಕೆ ಬರಬಹುದು. ಹೀಗಾದಲ್ಲಿ ರಿಷಬ್ ಪಂತ್, ದೀಪಕ್ ಹೂಡಾ ತಂಡದಿಂದ ಹೊರಹೋಗಬಹುದು. ಕೆಎಲ್ ರಾಹುಲ್ ಫಾರ್ಮ್ ಬಗ್ಗೆಯೂ ತೀವ್ರ ಟೀಕೆ ಕೇಳಿಬಂದಿದೆ. ಆದರೆ ಅವರನ್ನು ಸದ್ಯಕ್ಕೆ ಹೊರಗಿಡುವುದು ಅನುಮಾನ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಇರದು. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.