Select Your Language

Notifications

webdunia
webdunia
webdunia
webdunia

ರೋಹಿತ್, ದ್ರಾವಿಡ್ ಗೆ ನಾಲ್ಕು ಪ್ರಶ್ನೆ ಹಾಕಿದ ಹರ್ಭಜನ್ ಸಿಂಗ್

ರೋಹಿತ್, ದ್ರಾವಿಡ್ ಗೆ ನಾಲ್ಕು ಪ್ರಶ್ನೆ ಹಾಕಿದ ಹರ್ಭಜನ್ ಸಿಂಗ್
ದುಬೈ , ಬುಧವಾರ, 7 ಸೆಪ್ಟಂಬರ್ 2022 (09:30 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧವೂ ಸೋತ ಬಳಿಕ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ತೀವ್ರ ಟೀಕೆಗೆ ಗುರಿಯಾಗಿದೆ.

ತಂಡದ ಆಯ್ಕೆ ವಿಚಾರದಲ್ಲಿ ಟೀಂ ಇಂಡಿಯಾ ಎಡವಿದೆ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ. ಅದರಲ್ಲೂ ಏಷ್ಯಾ ಕಪ್ ನಂತಹ ಪ್ರಮುಖ ಟೂರ್ನಿಗೆ ಪ್ರಮುಖ ವೇಗಿಗಳಲ್ಲಿಲ್ಲದ ತಂಡ ಆಯ್ಕೆ ಮಾಡಿರುವುದರ ಬಗ್ಗೆ ತೀವ್ರ ಟೀಕೆ ಕೇಳಿಬಂದಿದೆ.

ಈ ಬಗ್ಗೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಗೆ ನಾಲ್ಕು ಪ್ರಶ್ನೆ ಹಾಕಿದ್ದಾರೆ. ‘150 ಕಿ.ಮೀ. ವೇಗದಲ್ಲಿ ಚೆಂಡು ಎಸೆಯಬಲ್ಲ ಉಮ್ರಾನ್ ಮಲಿಕ್ ಎಲ್ಲಿದ್ದಾರೆ? ಟಾಪ್ ಕ್ಲಾಸ್  ಸ್ವಿಂಗ್ ಬೌಲರ್ ದೀಪಕ್ ಚಹರ್ ಗೆ ತಂಡದಲ್ಲಿ ಸ್ಥಾನವಿಲ್ಲವೇ? ದಿನೇಶ್ ಕಾರ್ತಿಕ್ ಗೆ ಯಾಕೆ ನಿಯಮಿತವಾಗಿ ಅವಕಾಶ ಸಿಗುತ್ತಿಲ್ಲ? ನಿಜಕ್ಕೂ ಇದು ಬೇಸರದ ಸಂಗತಿ’ ಎಂದು ಭಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಷ್ಯಾ ಕಪ್ ಕ್ರಿಕೆಟ್: ರೋಹಿತ್ ಶರ್ಮಾ ದುರ್ವರ್ತನೆಗೆ ಭಾರೀ ಟೀಕೆ