ಮುಂಬೈ: ಟೀಂ ಇಂಡಿಯಾದ ಪ್ರಮುಖ ವೇಗಿಗಳ ಸಾಲಿನಲ್ಲಿ ಜಸ್ಪ್ರೀತ್ ಬುಮ್ರಾ ಬಳಿಕ ಮೊಹಮ್ಮದ್ ಶಮಿ ಹೆಸರು ಬರುತ್ತದೆ. ಆದರೆ ರೋಹಿತ್ ಶರ್ಮಾ ತಂಡದ ನಾಯಕತ್ವ ವಹಿಸಿಕೊಂಡ ಮೇಲೆ ಶಮಿಗೆ ಟೀಂ ಇಂಡಿಯಾ ಸೀಮಿತ ಓವರ್ ಗಳ ಪಂದ್ಯಗಳಲ್ಲಿ ಅವಕಾಶವೇ ಸಿಕ್ಕಿಲ್ಲ!
ಕಳೆದ ಟಿ20 ವಿಶ್ವಕಪ್ ನಲ್ಲಿ ಮೊಹಮ್ಮದ್ ಶಮಿ ತಂಡ ಪ್ರತಿನಿಧಿಸಿದ್ದೇ ಕೊನೆ. ಆಗ ಕೊಹ್ಲಿ-ರವಿಶಾಸ್ತ್ರಿ ತಂಡದ ಚುಕ್ಕಾಣಿ ಹೊಂದಿದ್ದರು. ಇದಾದ ಬಳಿಕ ತಂಡಕ್ಕೆ ದ್ರಾವಿಡ್ ಕೋಚ್ ಆಗಿ ರೋಹಿತ್ ನಾಯಕರಾಗಿ ಆಗಮಿಸಿದ್ದರು.
ಇವರ ಯುಗದಲ್ಲಿ ಶಮಿ ಸಂಪೂರ್ಣ ಮೂಲೆಗುಂಪಾಗಿದ್ದಾರೆ. ಬುಮ್ರಾ ಅನುಪಸ್ಥಿತಿಯಲ್ಲಾದರೂ ಶಮಿಗೆ ಏಷ್ಯಾ ಕಪ್ ತಂಡದಲ್ಲಿ ಸಿಗಬಹುದು ಎಂಬ ಭರವಸೆಯಿತ್ತು. ಆದರೆ ಏಷ್ಯಾ ಕಪ್ ನಲ್ಲೂ ಅವರನ್ನು ಕಡೆಗಣಿಸಿ ಅನನುಭವಿ, ಅಷ್ಟೇನೂ ಪ್ರಭಾವ ಬೀರದ ಯುವ ಬೌಲರ್ ಗಳನ್ನು ಆಡಿಸಲಾಗಿದೆ. ಈ ಅತಿಯಾದ ಪ್ರಯೋಗಕ್ಕೆ ಟೀಂ ಇಂಡಿಯಾ ತಕ್ಕ ಬೆಲೆ ತೆತ್ತಿದೆ.