ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಜಾಹೀರಾತು ಒಪ್ಪಂದಗಳಿಂದ ನೂರಾರು ಕೋಟಿ ಜೇಬಿಗಿಳಿಸುತ್ತಿದ್ದು, ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲೊಬ್ಬರಾಗಿದ್ದಾರೆ.
ಖ್ಯಾತ ಸ್ಪೋರ್ಟ್ಸ್ ಬ್ರ್ಯಾಂಡ್ ಪ್ಯೂಮಾ ಇಂಡಿಯಾ ಜೊತೆ ಕೊಹ್ಲಿ 8 ವರ್ಷಗಳಿಂದ ಒಪ್ಪಂದ ಹೊಂದಿದ್ದರು. ಸುಮಾರು 110 ಕೋಟಿ ರೂ.ಗಳ ಒಪ್ಪಂದ ಇದಾಗಿತ್ತು. ಇದೀಗ ಕೊಹ್ಲಿ ಆ ಒಪ್ಪಂದವನ್ನು ಕಡಿದುಕೊಂಡಿದ್ದಾರೆ. ಅದರ ಬದಲು ಎಜಿಲಿಟಾಸ್ ಸಂಸ್ಥೆಯೊಂದಿಗೆ ಹೊಸ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಹಿಂದೆ ಪ್ಯೂಮಾ ಜೊತೆಗೆ ಒಪ್ಪಂದ ಮಾಡಿಕೊಂಡುವಾಗ ಇದ್ದ ವ್ಯವಸ್ಥಾಪಕ ಅಭಿಷೇಕ್ ಅವರೇ ಈಗ ಎಜಿಲಿಟಾಸ್ ಸಂಸ್ಥೆಯ ವ್ಯವಸ್ಥಾಪಕರಾಗಿದ್ದಾರೆ. ಹೀಗಾಗಿ ಅವರು ಈಗ ಎಜಿಲಿಟಾಸ್ ಜೊತೆ ಒಪ್ಪಂದ ಮಾಡಿಕೊಂಡಿರುವುದರ ಹಿಂದೆ ಇದೇ ಕಾರಣವಿರಬಹುದಾ ಎಂಬ ಅನುಮಾನಗಳಿವೆ.
ಪ್ಯೂಮಾ ಇಂಡಿಯಾ ಜೊತೆ ಕೊಹ್ಲಿ 2017 ರಲ್ಲಿ ಒಪ್ಪಂದ ಮಾಡಿಕೊಂಡಿದ್ದರು. ಇದೀಗ ಅಭಿಷೇಕ್ ಎಜಿಲಿಟಾಸ್ ಸಂಸ್ಥೆಯ ವ್ಯವಸ್ಥಾಕಪರಾದ ಮೇಲೆ ಸಂಸ್ಥೆ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಇದೀಗ ಕೊಹ್ಲಿ ಕೂಡಾ ಎಜಿಲಿಟಾಸ್ ಸಂಸ್ಥೆಯ ಪಾಲುದಾರಾಗಿದ್ದಾರೆ. ಹೀಗಾಗಿ ಪ್ಯೂಮಾ ಬಿಟ್ಟು ಎಜಿಲಿಟಾಸ್ ಕೈ ಹಿಡಿದಿದ್ದಾರೆ.
ಎಜಿಲಿಟಾಸ್ ಕೂಡಾ ವೇಗವಾಗಿ ಬೆಳೆಯುತ್ತಿರುವ ಸಂಸ್ಥೆಯಾಗಿದೆ. ಈಗಾಗಲೇ ಪ್ರಮುಖ ಶೂ ತಯಾರಿಕಾ ಕಂಪನಿಗಳಿಗೆ ಶೂ ತಯಾರಿಸಿ ಕೊಡುತ್ತಿರುವ ಮೋಚಿಕೋ ಪ್ರೈ. ಲಿಮಿಟೆಡ್ ಎಂಬ ಕಂಪನಿಯನ್ನು ಖರೀದಿ ಮಾಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಂಪನಿಗಳನ್ನು ಖರೀದಿ ಮಾಡುವ ಸಾಧ್ಯತೆಯಿದೆ. ಹೀಗಾಗಿ ಭವಿಷ್ಯವನ್ನು ಗಮದಲ್ಲಿಟ್ಟುಕೊಂಡು ಎಜಿಲಿಟಾಸ್ ಜೊತೆ ಕೊಹ್ಲಿ ಒಪ್ಪಂದ ಮಾಡಿಕೊಂಡಿದ್ದಾರೆ.