Select Your Language

Notifications

webdunia
webdunia
webdunia
webdunia

ಫಾರಿನ್ ಗೆ ಹೋದ ಕೊಹ್ಲಿ ಬರಲ್ಲ, ಮೂರನೇ ಟೆಸ್ಟ್ ಆಡಲ್ಲ

Virat Kohli

Krishnaveni K

ಮುಂಬೈ , ಭಾನುವಾರ, 4 ಫೆಬ್ರವರಿ 2024 (10:18 IST)
ಮುಂಬೈ: ಕೌಟುಂಬಿಕ ಕಾರಣ ನೀಡಿ ಇಂಗ್ಲೆಂಡ್ ವಿರುದ್ಧ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿರುವ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮೂರನೇ ಟೆಸ್ಟ್ ಪಂದ್ಯದಲ್ಲೂ ಭಾಗಿಯಾಗುವುದು ಅನುಮಾನವೆನ್ನಲಾಗಿದೆ.

ಮೊದಲ ಎರಡು ಟೆಸ್ಟ್ ಪಂದ್ಯಕ್ಕೆ ತಮ್ಮನ್ನು ಪರಿಗಣಿಸದಿರುವಂತೆ ಕೊಹ್ಲಿ ಮನವಿ ಮಾಡಿದ್ದರು. ಅದರಂತೆ ಆಯ್ಕೆಗಾರರು ಅವರನ್ನು ಕೈ ಬಿಟ್ಟಿದ್ದರು. ಆದರೆ ಮೂರನೇ ಪಂದ್ಯದ ವೇಳೆ ತಂಡಕ್ಕೆ ಪುನರಾಗಮನ ಮಾಡುವ ನಿರೀಕ್ಷೆಯಿತ್ತು. ಆದರೆ ಇದೀಗ ಅದೂ ಸುಳ್ಳಾಗುವ ಸಾಧ‍್ಯತೆಯಿದೆ.

ವಿದೇಶದಲ್ಲಿರುವ ಕೊಹ್ಲಿ
ಕೌಟುಂಬಿಕ ಕಾರಣಗಳಿಂದಾಗಿ ವಿರಾಟ್ ಕೊಹ್ಲಿ ಇದೀಗ ವಿದೇಶದಲ್ಲಿದ್ದು, ಮೂರನೇ ಟೆಸ್ಟ್ ಪಂದ್ಯದ ವೇಳೆಗೆ ವಾಪಸಾಗುವುದು ಅನುಮಾನವೆನ್ನಲಾಗಿದೆ. ಈಗಾಗಲೇ ಕೊಹ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಟೀಂ ಮ್ಯಾನೇಜ್ ಮೆಂಟ್ ಗೆ ಈ ಮಾಹಿತಿ ನೀಡಿದ್ದಾರಂತೆ. ದೇಶಕ್ಕಾಗಿ ಆಡುವುದು ನನ್ನ ಆದ್ಯತೆ. ಆದರೆ ಕೆಲವು ಅನಿವಾರ್ಯ ಪರಿಸ್ಥಿತಿಗಳಿಂದಾಗಿ ಆಡಲು ಸಾಧ‍್ಯವಾಗುತ್ತಿಲ್ಲ ಎಂದು ಕೊಹ್ಲಿ ತಿಳಿಸಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಗರ್ಭಿಣಿಯಾಗಿದ್ದು, ಇದೇ ಕಾರಣಕ್ಕೆ ಕೊಹ್ಲಿ ಪದೇ ಪದೇ ಇತ್ತೀಚೆಗಿನ ದಿನಗಳಲ್ಲಿ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬ ಅನುಮಾನಗಳಿವೆ. ಆದರೆ ದಂಪತಿ ಎಲ್ಲೂ ಈ ವಿಚಾರವನ್ನು ಬಾಯ್ಬಿಟ್ಟಿಲ್ಲ. ಆದರೆ ಸಂದರ್ಶನವೊಂದರಲ್ಲಿ ಕೊಹ್ಲಿ ಸ್ನೇಹಿತ ಎಬಿಡಿ ವಿಲಿಯರ್ಸ್ ಅನುಷ್ಕಾ ಗರ್ಭಿಣಿಯಾಗಿರುವ ವಿಚಾರವನ್ನು ಹೊರಹಾಕಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಎರಡನೇ ಮಗುವಿನ ಬಗ್ಗೆ ಬಾಯ್ಬಿಟ್ಟು ಎಡವಟ್ಟು ಮಾಡಿಕೊಂಡ ಎಬಿಡಿ