Select Your Language

Notifications

webdunia
webdunia
webdunia
webdunia

ರಾಹುಲ್, ಜಡೇಜಾ ಇಲ್ಲ, ಕೊಹ್ಲಿಯೂ ಬರಲ್ಲ: ಟೀಂ ಇಂಡಿಯಾ ಗೆಲ್ಲೋದು ಹೇಗೆ?

KL Rahul

Krishnaveni K

ವಿಶಾಖಪಟ್ಟಣಂ , ಮಂಗಳವಾರ, 30 ಜನವರಿ 2024 (08:20 IST)
Photo Courtesy: Twitter
ವಿಶಾಖಪಟ್ಟಣಂ: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಸೋತ ಬೆನ್ನಲ್ಲೇ ಟೀಂ ಇಂಡಿಯಾಕ್ಕೆ ಬಿಗ್ ಶಾಕ್ ಎದುರಾಗಿದೆ. ಕೆಎಲ್ ರಾಹುಲ್, ಜಡೇಜಾ ದ್ವಿತೀಯ ಟೆಸ್ಟ್ ಪಂದ್ಯದಿಂದ ಔಟ್ ಆಗಿದ್ದಾರೆ.

ಜಡೇಜಾ ಮತ್ತು ಕೆಎಲ್ ರಾಹುಲ್ ಮೊದಲ ಟೆಸ್ಟ್ ಪಂದ್ಯದಲ್ಲಿ ತಂಡದ ಪಾಲಿಗೆ ಆಪತ್ ಬಾಂಧವರಾಗಿದ್ದರು. ಆದರೆ ಈಗ ಇಬ್ಬರೂ ಜೊತೆಯಲ್ಲಿ ಗಾಯಗೊಂಡು ತಂಡದಿಂದ ಹೊರಗುಳಿದಿರುವುದು ನಿಜಕ್ಕೂ ಶಾಕ್ ಆದಂತಾಗಿದೆ. ಇಬ್ಬರೂ ಸ್ಟಾರ್ ಆಟಗಾರರು ಗಾಯಗೊಂಡಿರುವುದಾಗಿ ಸ್ವತಃ ಬಿಸಿಸಿಐ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದೆ.

ಆಫ್ರಿಕಾ ಪ್ರವಾಸದ ವೇಳೆಯೂ ಜಡೇಜಾ ಗಾಯದಿಂದ ಒಂದು ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ವೇಳೆ ಮತ್ತೆ ರನೌಟ್ ತಪ್ಪಿಸಲು ಹೋಗಿ ಬಿದ್ದು ಮಂಡಿಗೆ ಗಾಯ ಮಾಡಿಕೊಂಡಿದ್ದರು. ಇದೀಗ ಅದೇ ಸಮಸ್ಯೆಯಿಂದ ಅವರು ತಂಡದಿಂದಲೇ ಹೊರನಡೆಯಬೇಕಾಗಿ ಬಂದಿದೆ.

ಅತ್ತ ಕೆಎಲ್ ರಾಹುಲ್ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 86 ರನ್ ಸಿಡಿಸಿದ್ದರು. ಇದೀಗ ಅವರು ಬಲ ತೊಡೆ ನೋವಿನಿಂದ ಬಳಲುತ್ತಿದ್ದು ಇದೇ ಕಾರಣಕ್ಕೆ ಎರಡನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ.

ಈಗಾಗಲೇ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಸೇವೆಯಿಂದ ವಂಚಿತವಾಗಿದೆ. ಕೌಟುಂಬಿಕ ಕಾರಣಗಳಿಂದ ಕೊಹ್ಲಿ ಮೊದಲ ಎರಡು ಪಂದ್ಯಗಳಿಂದ ದೂರವುಳಿದಿದ್ದಾರೆ. ಇದೀಗ ಜಡೇಜಾ, ರಾಹುಲ್ ಕೂಡಾ ಹೊರಗುಳಿಯಬೇಕಾಗಿ ಬಂದಿರುವುದರಿಂದ ಗೆಲ್ಲುವ ಒತ್ತಡದಲ್ಲಿರುವ ತಂಡಕ್ಕೆ ಬಿಗ್ ಶಾಕ್ ಎದುರಾದಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಿಲ್ ಗೆ ಸಿಕ್ಕಷ್ಟು ಅವಕಾಶ ಪೂಜಾರಗೂ ಸಿಕ್ಕಿಲ್ಲ: ಅನಿಲ್ ಕುಂಬ್ಳೆ