Select Your Language

Notifications

webdunia
webdunia
webdunia
webdunia

ಎರಡನೇ ಟೆಸ್ಟ್ ಪಂದ್ಯಕ್ಕೆ ರವೀಂದ್ರ ಜಡೇಜಾ ಇಲ್ಲ

Ravindra Jadeja

Krishnaveni K

ವಿಶಾಖಪಟ್ಟಣಂ , ಸೋಮವಾರ, 29 ಜನವರಿ 2024 (12:43 IST)
ವಿಶಾಖಪಟ್ಟಣಂ: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ರವೀಂದ್ರ ಜಡೇಜಾ ಆಡುವುದು ಅನುಮಾನವಾಗಿದೆ.

ಮೊದಲ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ 28 ರನ್ ಗಳಿಂದ ಸೋತು ಮುಖಭಂಗ ಅನುಭವಿಸಿತ್ತು. ಈ ಪಂದ್ಯದಲ್ಲಿ ಜಡೇಜಾ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಮಿಂಚಿದ್ದರು.

ಆದರೆ ಇದೀಗ ಎರಡನೇ ಟೆಸ್ಟ್ ಪಂದ್ಯಕ್ಕೆ ಮುನ್ನ ಜಡೇಜಾ ರೂಪದಲ್ಲಿ ಭಾರತಕ್ಕೆ ಆಘಾತ ಸಿಕ್ಕಿದೆ. ಎರಡನೇ ಟೆಸ್ಟ್ ನಲ್ಲಿ ಜಡೇಜಾ ಆಡುವುದು ಅನುಮಾನ ಎಂದು ಸ್ವತಃ ಕೋಚ್ ರಾಹುಲ್ ದ್ರಾವಿಡ್ ಸುಳಿವು ನೀಡಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ವೇಳೆ ಜಡೇಜಾ ಗಾಯಗೊಂಡಿದ್ದರು. ಹೀಗಾಗಿ ಅವರು ಮುಂದಿನ ಪಂದ್ಯಕ್ಕೆ ಲಭ್ಯರಿರುತ್ತಾರೆಯೇ ಎಂದು ಕೋಚ್ ದ್ರಾವಿಡ್ ಗೆ ಪ್ರಶ್ನಿಸಲಾಗಿತ್ತು. ಈ ವೇಳೆ ಅವರು ಅನುಮಾನ ಎನ್ನುವ ರೀತಿಯಲ್ಲಿ ಉತ್ತರಿಸಿದ್ದಾರೆ.

‘ನಾವು ಪರಿಸ್ಥಿತಿ ನೋಡಿಕೊಂಡು ನಿರ್ಧರಿಸಬೇಕಾಗಿದೆ. ಫಿಸಿಯೋ ಜೊತೆ ಇನ್ನೂ ಮಾತನಾಡಿಲ್ಲ. ಫಿಸಿಯೋ ವರದಿ ಬಳಿಕ ಏನು ಮಾಡಬೇಕೆಂದು ನಿರ್ಧರಿಸಬೇಕಿದೆಯಷ್ಟೇ’ ಎಂದಿದ್ದಾರೆ. ಹೀಗಾಗಿ ಜಡೇಜಾ ತಂಡದೊಂದಿಗೆ ವಿಶಾಖಪಟ್ಟಣಂಗೆ ತೆರಳುವ ಬದಲು ಬೆಂಗಳೂರಿನ ಎನ್ ಸಿಎಗೆ ಮರಳಲಿದ್ದಾರೆ ಎನ್ನಲಾಗಿದೆ.

ದ.ಆಫ್ರಿಕಾ ಸರಣಿ ವೇಳೆ ಜಡೇಜಾ ಗಾಯಗೊಂಡಿದ್ದರು. ಹಿಗಾಗಿ ಮೊದಲ ಟೆಸ್ಟ್ ಪಂದ್ಯವನ್ನು ಅವರು ಆಡಿರಲಿಲ್ಲ. ಆದರೆ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಅವರು ವಾಪಸಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ವಿರೋಧಿ ಪೋಸ್ಟ್ ಗೆ ಲೈಕ್ ಮಾಡಿದ್ದ ರೋಹಿತ್ ಶರ್ಮಾ