ಮತ್ತೆ ಲಂಡನ್ ನಲ್ಲಿ ಕೀರ್ತನೆಯಲ್ಲಿ ಪಾಲ್ಗೊಂಡ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ

Krishnaveni K
ಶನಿವಾರ, 27 ಜುಲೈ 2024 (11:53 IST)
ಲಂಡನ್: ಸದ್ಯಕ್ಕೆ ಪತ್ನಿ ಮಕ್ಕಳ ಜೊತೆ ಲಂಡನ್ ನಲ್ಲಿರುವ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತೊಮ್ಮೆ ಕೀರ್ತನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಆ ಮೂಲಕ ಕೊಹ್ಲಿ ತಮ್ಮ ಆಧ್ಯಾತ್ಮದ ಒಲವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ದಂಪತಿ ಕೃಷ್ಣದಾಸ್ ಅವರ ಕೀರ್ತನೆ ಕಾರ್ಯಕ್ರಮಗಳನ್ನು ತಪ್ಪದೇ ಅಟೆಂಡ್ ಮಾಡುತ್ತಾರೆ. ಕೆಲವು ದಿನಗಳ ಹಿಂದಷ್ಟೇ ಕೊಹ್ಲಿ ದಂಪತಿ ಲಂಡನ್ ನ ಯೂನಿಯನ್ ಚಾಪೆಲ್ ನಲ್ಲಿ ನಡೆದಿದ್ದ ಕೀರ್ತನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇದೀಗ ಮತ್ತೊಮ್ಮೆ ಕೃಷ್ಣ ದಾಸ್ ಅವರ ಕೀರ್ತನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಕೃಷ್ಣದಾಸ್ ಖ್ಯಾತ ಕೀರ್ತನಕಾರ. ಯೋಗ ಜೊತೆಗೆ ಕೀರ್ತನೆಗಳನ್ನು ಹಾಡುತ್ತಾ, ಭಾರತೀಯ ಸಾಂಪ್ರದಾಯಿಕ ಭಜನೆ ಹಾಡುಗಳನ್ನು ಪ್ರಚುರಪಡಿಸುವುದರಲ್ಲಿ ಅವರು ಖ್ಯಾತರಾಗಿದ್ದಾರೆ.

ಅವರ ಕಾರ್ಯಕ್ರಮಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಜನ ಬರುತ್ತಾರೆ. ಕೊಹ್ಲಿ ದಂಪತಿ ಈಗಾಗಲೇ ಹಲವು ಬಾರಿ ಕೃಷ್ಣದಾಸ್ ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಾವು ಅವರ ಅಭಿಮಾನಿಗಳು ಎಂದು ನಿರೂಪಿಸಿದ್ದಾರೆ. ಕೃಷ್ಣದಾಸ್ ಭಜನೆ ಕಾರ್ಯಕ್ರಮದಲ್ಲಿ ತನ್ಮಯರಾಗಿ ಕುಳಿತು ಕೊಹ್ಲಿ ದಂಪತಿ ತಾವೂ ಭಕ್ತಿಭಾವದಲ್ಲಿ ಮುಳುಗಿದ್ದಾರೆ. ಈ ಬಾರಿಯೂ ಅವರು ಕೀರ್ತನೆಯಲ್ಲಿ ಭಾಗಿಯಾದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ, ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿ ವೇಳಾಪಟ್ಟಿ, ಸಮಯ ವಿವರ ಇಲ್ಲಿದೆ

ಮೊಹಮ್ಮದ್ ಶಮಿ ಫಿಟ್ನೆಸ್ ಬಗ್ಗೆ ಹೊರಗೊಂದು ಒಳಗೊಂದು ಹೇಳುತ್ತಿದ್ದಾರಾ

ಆರ್ ಸಿಬಿಗೆ ಹೊಸ ಮಾಲಿಕರು ಬಂದರೆ ಹೆಸರೂ ಬದಲಾಗುತ್ತಾ

ರವೀಂದ್ರ ಜಡೇಜಾರನ್ನು ಸೇಲ್ ಮಾಡಲು ಹೊರಟ ಸಿಎಸ್ ಕೆ: ಸ್ವಲ್ಪವಾದ್ರೂ ಕೃತಜ್ಞತೆ ಬೇಡ್ವಾ ಫ್ಯಾನ್ಸ್ ಗರಂ

ಗಾಯಗೊಂಡು ತಂಡದಿಂದ ಹೊರಬಿದ್ದರೂ ಪ್ರತೀಕಾ ರಾವಲ್‌ಗೆ ಚಿನ್ನ ಪದಕ ಸಿಗಲು ಇವರ ಕೃಪೆಯೇ ಕಾರಣ

ಮುಂದಿನ ಸುದ್ದಿ
Show comments