Select Your Language

Notifications

webdunia
webdunia
webdunia
webdunia

ಏಕದಿನ ನಾಯಕರಾಗಿ ಕೊಹ್ಲಿ: ಕೆಲವೇ ದಿನಗಳಲ್ಲಿ ನಿರ್ಧಾರವಾಗಲಿದೆ ಭವಿಷ್ಯ

ಏಕದಿನ ನಾಯಕರಾಗಿ ಕೊಹ್ಲಿ: ಕೆಲವೇ ದಿನಗಳಲ್ಲಿ ನಿರ್ಧಾರವಾಗಲಿದೆ ಭವಿಷ್ಯ
ಮುಂಬೈ , ಗುರುವಾರ, 2 ಡಿಸೆಂಬರ್ 2021 (10:10 IST)
ಮುಂಬೈ: ಟೀಂ ಇಂಡಿಯಾ ಟಿ20 ನಾಯಕತ್ವಕ್ಕೆ ರಾಜೀನಾಮೆ ನೀಡಿರುವ ವಿರಾಟ್ ಕೊಹ್ಲಿ ಏಕದಿನ ನಾಯಕತ್ವದಿಂದಲೂ ಕೆಳಗಿಳಿಯುವ ಬಗ್ಗೆ ಕೆಲವೇ ದಿನಗಳಲ್ಲಿ ನಿರ್ಧಾರವಾಗಲಿದೆ.

ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಲಿದ್ದು, ಈ ವೇಳೆ ಕೊಹ್ಲಿಯೇ ನಾಯಕರಾಗಿರುತ್ತಾರೋ ಅಥವಾ ರೋಹಿತ್ ಶರ್ಮಾಗೆ ಪಟ್ಟ ಕಟ್ಟಬಹುದೇ ಎನ್ನುವ ಅನುಮಾನಗಳಿವೆ.

ಕೆಲವು ಮೂಲಗಳ ಪ್ರಕಾರ ಈ ಸರಣಿಯಿಂದಲೇ ರೋಹಿತ್ ಗೆ ಏಕದಿನ ನಾಯಕತ್ವವನ್ನೂ ಒಪ್ಪಿಸಿ 2023 ರ ಏಕದಿನ ವಿಶ್ವಕಪ್ ಗೆ ತಂಡವನ್ನು ತಯಾರು ಮಾಡುವ ಹೊಣೆ ನೀಡಬಹುದು. ಇನ್ನೊಂದು ವಾದದ ಪ್ರಕಾರ ದಕ್ಷಿಣ ಆಫ್ರಿಕಾ ಸರಣಿಗೆ ಕೊಹ್ಲಿಯೇ ನಾಯಕರಾಗಲಿದ್ದು, ಇದಾದ ಬಳಿಕ ಅವರ ಏಕದಿನ ನಾಯಕತ್ವ ಕೊನೆಯಾಗಬಹುದು ಎನ್ನಲಾಗಿದೆ. ಅಂತೂ ಸದ್ಯದಲ್ಲೇ ಕೊಹ್ಲಿ ಏಕದಿನ ನಾಯಕತ್ವ ಭವಿಷ್ಯ ನಿರ್ಧಾರವಾಗುವುದು ಖಚಿತ.

Share this Story:

Follow Webdunia kannada

ಮುಂದಿನ ಸುದ್ದಿ

ಸುನಿಲ್ ಶೆಟ್ಟಿ ಫ್ಯಾಮಿಲಿಯೊಂದಿಗೆ ಕೆಎಲ್ ರಾಹುಲ್ ಪೋಸ್