Publish Date: Thu, 02 Dec 2021 (08:40 IST)
Updated Date: Thu, 02 Dec 2021 (09:02 IST)
ಮುಂಬೈ: ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಟೀಂ ಇಂಡಿಯಾದ ದ.ಆಫ್ರಿಕಾ ಪ್ರವಾಸ ಅನಿಶ್ಚಿತತೆಯಲ್ಲಿದೆ.
ಈ ಬಗ್ಗೆ ಸ್ವತಃ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿನ್ನೆ ಹೇಳಿಕೆ ನೀಡಿದ್ದರು. ಸದ್ಯಕ್ಕೆ ನಿಗದಿಯಂತೆ ಟೀಂ ಇಂಡಿಯಾ ಪ್ರವಾಸ ಮಾಡಲಿದೆ ಎಂದಿದ್ದರು.ಹಾಗಿದ್ದರೂ ಕೊನೆಯ ಕ್ಷಣದಲ್ಲಿ ಏನಾಗುತ್ತದೆಂದು ಹೇಳಲಾಗದು.
ಹೀಗಾಗಿ ಟೀಂ ಇಂಡಿಯಾ ಆಟಗಾರರ ಆಯ್ಕೆ ಪ್ರಕ್ರಿಯೆಗೆ ಸದ್ಯಕ್ಕೆ ತಡೆ ನೀಡಲಾಗಿದೆ. ಪ್ರವಾಸದ ಬಗ್ಗೆ ಖಚಿತವಾದ ಬಳಿಕವಷ್ಟೇ ಆಟಗಾರರ ಆಯ್ಕೆ ನಡೆಯಲಿದೆ. ಡಿಸೆಂಬರ್ 8 ರಿಂದ ಟೀಂ ಇಂಡಿಯಾ ಆಫ್ರಿಕಾ ನಾಡಿಗೆ ಪ್ರಯಾಣ ಬೆಳೆಸಬೇಕಾಗಿದೆ.