Publish Date: Thu, 12 Feb 2026 (16:27 IST)
Updated Date: Thu, 12 Feb 2026 (16:33 IST)
ಮುಂಬೈ: ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ ಮುಗಿಸಿ ಲಂಡನ್ ಗೆ ಮರಳಿದ್ದ ವಿರಾಟ್ ಕೊಹ್ಲಿ ಇದೀಗ ಮತ್ತೆ ಭಾರತಕ್ಕೆ ವಾಪಸ್ ಆಗಿದ್ದಾರೆ. ಏರ್ ಪೋರ್ಟ್ ನಲ್ಲಿ ತಾವೇ ಅಭಿಮಾನಿಗಳನ್ನು ಕರೆದು ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ವಿರಾಟ್ ಕೊಹ್ಲಿ ಏರ್ ಪೋರ್ಟ್ ಗೆ ಬಂದರೆ ಸಾಕಷ್ಟು ಅಭಿಮಾನಿಗಳು ಅವರನ್ನು ಸುತ್ತುವರಿಯುತ್ತಾರೆ. ಲಂಡನ್ ನಿಂದ ದೂರದ ಟ್ರಾವೆಲ್ ಮಾಡಿದ ಕೊಹ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಇಂದು ಬಂದಿಳಿದಿದ್ದಾರೆ. ಈ ವೇಳೆ ಸಾಕಷ್ಟು ಜನ ಪಪ್ಪಾರಾಜಿಗಳು, ಅಭಿಮಾನಿಗಳು ಅವರ ಜೊತೆ ಫೋಟೋ ಬೇಕು ಎಂದು ಆಗ್ರಹಿಸಿದ್ದಾರೆ.
ಅಷ್ಟು ದೂರ ಟ್ರಾವೆಲ್ ಮಾಡಿಕೊಂಡು ಬಂದ ಮೇಲೂ ಕೊಹ್ಲಿ ಸ್ವಲ್ಪವೂ ಬೇಸರಿಸಲಿಲ್ಲ. ಬ್ಯಾಗ್ ನ್ನೆಲ್ಲಾ ಕಾರಿನಲ್ಲಿಟ್ಟು ಬಳಿಕ ಒಬ್ಬೊಬ್ಬರನ್ನೇ ಕರೆದು ತಾವಾಗಿಯೇ ಹೆಗಲ ಮೇಲೆ ಕೈ ಹಾಕಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಕೊಹ್ಲಿ ಫೋಟೋಗೆ ಪೋಸ್ ಕೊಡುತ್ತಿದ್ದಾರೆಂದು ತಿಳಿದು ಸಾಕಷ್ಟು ಜನ ಜಮಾಯಿಸಿದ್ದಾರೆ. ಅವರೆಲ್ಲರಿಗೂ ತಾಳ್ಮೆಯಿಂದ ಪೋಸ್ ಕೊಟ್ಟು ಮರಳಿದ್ದಾರೆ. ಇನ್ನೇನು ಐಪಿಎಲ್ 2026 ಕ್ಕೆ ತಯಾರಿ ಆರಂಭವಾಗಲಿದೆ. ಈ ಕಾರಣಕ್ಕೆ ಕೊಹ್ಲಿ ಮತ್ತೆ ಭಾರತಕ್ಕೆ ಬಂದಿಳಿದಿದ್ದಾರೆ.