Publish Date: Thu, 12 Feb 2026 (11:41 IST)
Updated Date: Thu, 12 Feb 2026 (11:43 IST)
ಸಿಡ್ನಿ: ಭಾರತದಲ್ಲಿ ಈಗ ಪುರುಷರ ಕ್ರಿಕೆಟ್ ನಂತೇ ಮಹಿಳಾ ಕ್ರಿಕೆಟ್ ಕೂಡಾ ಜನಪ್ರಿಯವಾಗುತ್ತಿದೆ. ಇದೀಗ ಮಹಿಳಾ ಕ್ರಿಕೆಟಿಗರು ಆಸ್ಟ್ರೇಲಿಯಾದಲ್ಲಿ ಟಿ20, ಏಕದಿನ ಸರಣಿ ಆಡಲಿದ್ದು ವೇಳಾಪಟ್ಟಿ ಇಲ್ಲಿದೆ.
ಈಗಷ್ಟೇ ಡಬ್ಲ್ಯುಪಿಎಲ್ ಹಬ್ಬ ಮುಗಿದಿದೆ. ಸ್ಮೃತಿ ಮಂಧಾನ ನೇತೃತ್ವದ ಆರ್ ಸಿಬಿ ಚಾಂಪಿಯನ್ ಆಗಿತ್ತು. ಭಾರತದಲ್ಲಿ ಈಗ ಮಹಿಳಾ ಕ್ರಿಕೆಟ್ ಪಂದ್ಯ ಆಯೋಜಿಸಿದರೆ ಸ್ಟೇಡಿಯಂ ಹೌಸ್ ಫುಲ್ ಆಗುತ್ತಿದೆ. ಸ್ಮೃತಿ, ಹರ್ಮನ್ ಪ್ರೀತ್ ಕೌರ್, ಜೆಮಿಮಾ, ದೀಪ್ತಿ ಶರ್ಮಾ ಎಂಬಂತೆ ಮಹಿಳಾ ತಾರೆಯರಿಗೆ ಈಗ ಅವರದ್ದೇ ಆದ ಅಭಿಮಾನಿ ವರ್ಗವಿದೆ.
ಇದೀಗ ಭಾರತ ವನಿತೆಯರ ತಂಡ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ್ದು 3 ಟಿ20 ಪಂದ್ಯ ಮತ್ತು ಮೂರು ಏಕದಿನ ಹಾಗೂ ಒಂದು ಟೆಸ್ಟ್ ಪಂದ್ಯ ಸೇರಿದಂತೆ ಪೂರ್ಣ ಪ್ರಮಾಣದ ಸರಣಿ ಆರಂಭವಾಗಲಿದೆ. ಟಿ20 ಪಂದ್ಯ ನಾಡಿದ್ದು ಫೆಬ್ರವರಿ 15 ರಿಂದ ಆರಂಭವಾಗುವುದು.
ಟಿ20 ಸರಣಿ ವೇಳಾಪಟ್ಟಿ:
ದಿನಾಂಕ ಸ್ಥಳ
ಫೆಬ್ರವರಿ 15 ಸಿಡ್ನಿ
ಫೆಬ್ರವರಿ 19 ಓವಲ್
ಫೆಬ್ರವರಿ 21 ಅಡಿಲೇಡ್
ಟಿ20 ಸರಣಿಯ ಎಲ್ಲಾ ಪಂದ್ಯಗಳೂ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 1.45 ಕ್ಕೆ ಆರಂಭವಾಗುವುದು.
ಏಕದಿನ ಸರಣಿ ವೇಳಾಪಟ್ಟಿ
ದಿನಾಂಕ ಸ್ಥಳ
ಫೆ.24 ಬ್ರಿಸ್ಬೇನ್
ಫೆ.27 ಹೋಬರ್ಟ್
ಮಾರ್ಚ್ 1 ಹೋಬರ್ಟ್
ಏಕದಿನ ಸರಣಿಯ ಎಲ್ಲಾ ಪಂದ್ಯಗಳೂ ಭಾರತೀಯ ಕಾಲಮಾನ ಪ್ರಕಾರ ಬೆಳಿಗ್ಗೆ 9.20 ಕ್ಕೆ ಆರಂಭವಾಗಲಿದೆ.
ಟೆಸ್ಟ್ ಪಂದ್ಯ
ದಿನಾಂಕ ಸ್ಥಳ
ಮಾ. 6-9 ಪರ್ತ್
ಟೆಸ್ಟ್ ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಬೆಳಿಗ್ಗೆ 10.50 ಕ್ಕೆ ಆರಂಭವಾಗಲಿದೆ.