ಅಂಡರ್ 19 ವಿಶ್ವಕಪ್: ಭಾರತಕ್ಕೆ ಇಂದು ಲಂಕಾ ಎದುರಾಳಿ

ಭಾನುವಾರ, 19 ಜನವರಿ 2020 (09:57 IST)
ಮುಂಬೈ: ಅಂಡರ್ 19 ವಿಶ್ವಕಪ್ ಕ್ರಿಕೆಟ್ ಗೆ ಇಂದಿನಿಂದ ಚಾಲನೆ ಸಿಗಲಿದ್ದು, ಮೊದಲ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾವನ್ನು ಎದುರಿಸಲಿದೆ.


ಕಳೆದ ಬಾರಿ ರಾಹುಲ್ ದ್ರಾವಿಡ್ ಕೋಚ್ ಆಗಿದ್ದ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಬಾರಿ ದ್ರಾವಿಡ್ ಸೇವೆ ತಂಡಕ್ಕಿಲ್ಲ. ಹಾಗಿದ್ದರೂ ಪ್ರತಿಭಾವಂತರನ್ನು ಹೊಂದಿರುವ ಭಾರತ ತಂಡ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ.

ಪ್ರಿಯಮ್ ಗಾರ್ಗ್ ನೇತೃತ್ವದ ಭಾರತ ತಂಡಕ್ಕೆ ಯಶಸ್ವಿ ಜೈಸ್ವಾಲ್, ಧ್ರುವ ಚಾಂದ್ ಮುಂತಾದ ಪ್ರಮುಖ ಆಟಗಾರರು ಬಲ ತುಂಬಲಿದ್ದಾರೆ. ಈ ಪಂದ್ಯವೂ ಹೊನಲು ಬೆಳಕಿನಲ್ಲಿ ನಡೆಯಲಿದ್ದು, ಮಧ್ಯಾಹ್ನ 1.30 ಕ್ಕೆ ಪಂದ್ಯಾರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಗಂಗೂಲಿ ದಾಖಲೆ ಮುರಿಯಲಿರುವ ರೋಹಿತ್ ಶರ್ಮಾ