ಗಂಗೂಲಿ ದಾಖಲೆ ಮುರಿಯಲಿರುವ ರೋಹಿತ್ ಶರ್ಮಾ

ಭಾನುವಾರ, 19 ಜನವರಿ 2020 (09:49 IST)
ಬೆಂಗಳೂರು: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದು ಮೂರನೇ ಏಕದಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಆರಂಭಿಕ ರೋಹಿತ್ ಶರ್ಮಾ ಹೊಸ ದಾಖಲೆ ಮಾಡಲಿದ್ದಾರೆ.


ರೋಹಿತ್ ಇಂದು ನಾಲ್ಕು ರನ್ ಗಳಿಸಿದರೆ ಏಕದಿನ ಪಂದ್ಯಗಳಲ್ಲಿ 9000 ರನ್ ಪೂರೈಸಲಿದ್ದಾರೆ. ಈ ಮೂಲಕ ಅತೀ ವೇಗವಾಗಿ ಈ ದಾಖಲೆ ಮಾಡಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಮಾಜಿ ನಾಯಕ, ಬಿಸಿಸಿಐ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ದಾಖಲೆಯನ್ನು ಹಿಂದಿಕ್ಕಲಿದ್ದಾರೆ.

ಗಂಗೂಲಿ ಈ ದಾಖಲೆ ಮಾಡಲು 228 ಇನಿಂಗ್ಸ್ ತೆಗೆದುಕೊಂಡರೆ ರೋಹಿತ್ ಕೇವಲ 217 ನೇ ಇನಿಂಗ್ಸ್ ನಲ್ಲಿ ಈ ದಾಖಲೆ ಮಾಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆಯ್ಕೆ: ಕೆಎಲ್ ರಾಹುಲ್ ಗೆ ಗಿಫ್ಟ್?