ನ್ಯೂಜಿಲೆಂಡ್ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆಯ್ಕೆ: ಕೆಎಲ್ ರಾಹುಲ್ ಗೆ ಗಿಫ್ಟ್?

ಭಾನುವಾರ, 19 ಜನವರಿ 2020 (09:47 IST)
ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆಯ್ಕೆ ಇಂದು ನಡೆಯಲಿದ್ದು, ಸೀಮಿತ ಓವರ್ ಗಳ ಪಂದ್ಯಗಳಲ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸಿರುವ ಕೆಎಲ್ ರಾಹುಲ್ ಗೆ ಆಯ್ಕೆ ಸಮಿತಿ ಗಿಫ್ಟ್ ನೀಡುವ ಸಾಧ್ಯತೆಯಿದೆ.


ಫಾರ್ಮ್ ಕೊರತೆಯಿಂದಾಗಿ ಟೆಸ್ಟ್ ಪಂದ್ಯಗಳಲ್ಲಿ ಆರಂಭಿಕ ಸ್ಥಾನ ಕಳೆದುಕೊಂಡ ರಾಹುಲ್ ಬಳಿಕ ತಂಡದಿಂದಲೂ ಕೊಕ್ ಪಡೆದಿದ್ದರು. ಆದರೆ ಇದೀಗ ಏಕದಿನ ಪಂದ್ಯಗಳಲ್ಲಿ ಫಾರ್ಮ್ ಪ್ರದರ್ಶಿಸಿದ ಬಳಿಕ ರಾಹುಲ್ ಗೆ ಮತ್ತೆ ಟೆಸ್ಟ್ ತಂಡಕ್ಕೆ ಕರೆ ಸಿಗುವ ಸಾಧ‍್ಯತೆಯಿದೆ.

ಹಾರ್ದಿಕ್ ಪಾಂಡ್ಯ ಚೇತರಿಸಿಕೊಳ್ಳದ ಕಾರಣ ಅವರು ಮತ್ತೆ ಹೊರಗುಳಿಯುವ ಸಾಧ್ಯತೆಯಿದೆ. ಯುವ ಬ್ಯಾಟ್ಸ್ ಮನ್ ಪೃಥ್ವಿ ಶಾ ಟೆಸ್ಟ್ ತಂಡಕ್ಕೆ ಆಯ್ಕೆಯಾಗುವ ಸಾಧ‍್ಯತೆಯಿದೆ. ಏಕದಿನ ಸರಣಿಗೂ ಇದೇ ಸಂದರ್ಭದಲ್ಲಿ ತಂಡದ ಆಯ್ಕೆ ನಡೆಯಲಿದ್ದು, ಕೇದಾರ್ ಜಾಧವ್, ಸೂರ್ಯಕುಮಾರ್ ಯಾದವ್ ಮುಂತಾದವರು ರೇಸ್ ನಲ್ಲಿದ್ದಾರೆ. ಅಂತಿಮವಾಗಿ ಆಯ್ಕೆಗಾರರ ಕೃಪೆ ಯಾರ ಮೇಲೆ ಇರಲಿದೆ ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಾನಿಯಾ ಮಿರ್ಜಾ ಭರ್ಜರಿ ಕಮ್ ಬ್ಯಾಕ್: ಅಮ್ಮನಾದ ಬಳಿಕ ಮೊದಲ ಟೈಟಲ್