ಸಾನಿಯಾ ಮಿರ್ಜಾ ಭರ್ಜರಿ ಕಮ್ ಬ್ಯಾಕ್: ಅಮ್ಮನಾದ ಬಳಿಕ ಮೊದಲ ಟೈಟಲ್

ಭಾನುವಾರ, 19 ಜನವರಿ 2020 (09:44 IST)
ಹೈದರಾಬಾದ್‍: ತಾಯಿಯಾದ ಬಳಿಕ ಕೆಲವು ದಿನಗಳ ಬ್ರೇಕ್ ತೆಗೆದುಕೊಂಡಿದ್ದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ.


ಅಮ್ಮನಾದ ಬಳಿಕ ಮೊದಲ ಅಂತಾರಾಷ್ಟ್ರೀಯ ಟೂರ್ನಮೆಂಟ್ ಆಡಿದ ಸಾನಿಯಾ ಮೊದಲ ಆಟದಲ್ಲೇ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ನಾಡಿಯಾ ಕಿಚ್ನೆನೊಕ್ ಜತೆಗೆ ಹೋಬರ್ಟ್ ಇಂಟರ್ನ್ಯಾಷನಲ್ ಟೂರ್ನಮೆಂಟ್ ನಲ್ಲಿ ಡಬಲ್ಸ್ ಪಂದ್ಯವಾಡಿದ ಸಾನಿಯಾ ಫೈನಲ್ ನಲ್ಲಿ ಜಯಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

33 ವರ್ಷದ ಸಾನಿಯಾ ಕಳೆದ ಎರಡು ವರ್ಷಗಳಿಂದ ತಾಯ್ತನದ ಕಾರಣದಿಂದ ಮೈದಾನಕ್ಕಿಳಿದಿರಲಿಲ್ಲ. ಆದರೆ ತಾಯಿಯಾದ ಬಳಿಕವೂ ಫಿಟ್ನೆಸ್ ಗಾಗಿ ಕಸರತ್ತು ನಡೆಸುತ್ತಿದ್ದರು. ಸುದೀರ್ಘ ಬಿಡುವಿನ ನಂತರವೂ ಅದೇ
ಫಾರ್ಮ್ ಪ್ರದರ್ಶಿಸಿದ ಸಾನಿಯಾ ಆಟಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಭಾರತ-ಆಸೀಸ್ ಏಕದಿನ: ಬೆಂಗಳೂರಿನಲ್ಲಿಂದು ಸಂಡೇ ಧಮಾಕ